ಕುಶಾಲನಗರ, ಅ 01: ಭಾರತೀಯ ಸೇನೆಯಲ್ಲಿ ಯೋಧನಾಗಿ ಕಳೆದ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೆರೆಕೊಪ್ಪಲು ಚಂದ್ರ ಶೆಟ್ಟಿ ಅವರ ಪುತ್ರ ಕುಮಾರ್ ಶೆಟ್ಟಿ ಅವರನ್ನು ಗ್ರಾಮಸ್ಥರು ಹಾಗೂ ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಂಡರು.
ಕೂಡಿಗೆ ಡೇರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಜಯಘೋಷಗಳೊಂದಿಗೆ ನಿವೃತ್ತ ಯೋಧ ಕುಮಾರ್ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಈ ಸಂದರ್ಭ ಗೆಳೆಯರಾದ ಮಂಜು, ನಾರಾಯಣ, ಹರ್ಷ, ವಿಜಯ್, ಕಿರಣ, ಗಜೇಂದ್ರ, ಸತೀಶ, ನಾಗೇಶ, ಪ್ರಶಾಂತ್, ಸೆಲ್ವ, ಅರುಣ್ ಮಾದಪ್ಪ, ಅಭಿಷೇಕ್ ಮತ್ತಿತರರು ಇದ್ದರು.
Back to top button
error: Content is protected !!