ಸನ್ಮಾನ

ವಿರಾಜಪೇಟೆ ಕ್ಷೇತ್ರ ಶಾಸಕ ಪೊನ್ನಣ್ಣರಿಗೆ ಮಹಾಮಂಡಳ ಅಧ್ಯಕ್ಷರಿಂದ ಸನ್ಮಾನ

ಕುಶಾಲನಗರ. ಏ.27: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ಆರ್. ಅರುಣ್ ರಾವ್‌ ಮತ್ತು ನಾಪಂಡ ಮುತ್ತಪ್ಪ ಅವರ ಸಂಗಡಿಗರು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ. ಎಸ್. ಪೊನ್ನಣ್ಣ ರವರಿಗೆ ಅವರ ನಿವಾಸದಲ್ಲಿ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಮುಖಂಡ, ಉದ್ಯಮಿ, ನಾಪಂಡ ಮುತ್ತಪ್ಪ, ಚಿಕ್ಕತ್ತೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪುರುಷೋತ್ತಮ್, ಐ.ಎನ್.ಟಿ ಸಿ. ಘಟಕದ ಜಿಲ್ಲಾ ಅಧ್ಯಕ್ಷ ಬಿ.ಡಿ. ಅಣ್ಣಯ್ಯ,ಅಜ್ಜಳ್ಳಿ ರವಿ, ತ್ರೀಣೇಶ್,ಮಲ್ಲೇಶ್, ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಶಿವಕುಮಾರ್, ಜಿಲ್ಲಾ ಯುನಿಯನ್ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್. ಆರ್. ಸುನಿಲ್ ರಾವ್, ತಿತಮತಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಪಿ.ಕೆ. ಮಣಿ ಕೂನ್ಯ, ಉಪಾಧ್ಯಕ್ಷೆ ಪುಷ್ಪ, ವಿರಾಜಪೇಟೆ ತಾಲ್ಲೂಕು ಯರವರ ಸಂಘದ ಅಧ್ಯಕ್ಷ ಸಿದ್ದಪ್ಪ, ಎಂ.ಎನ್ ನಾಗೇಶ್, ಗೋವಿಂದ ರಾಜ್ , ಸೇರಿದಂತೆ ಹಲವು ಮಂದಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!