ಟ್ರೆಂಡಿಂಗ್

ಕೊಡಗಿನ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿನಿಗೆ ಚಿನ್ನದ ಪದಕ.

ಕುಶಾಲನಗರ, ಜ 23: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರೂರು ಗ್ರಾಮ‌ ನಿವಾಸಿ ಹೆಬ್ಬಾಲೆ ಗ್ರಾಪಂ ಸದಸ್ಯ ಹೆಚ್. ಸಿ‌. ಮಹದೇವ್ ಎಂಬವರ ಪುತ್ರಿ ಎಂ.ಎಂ. ಸುಪ್ರಿತಾ ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಬಿ.ಎಸ್ಸಿ. ಅರಣ್ಯ ಸ್ನಾತಕ ಪದವಿಯಲ್ಲಿ (ಹಾನರ್ಸ್) (HONS) ಅರಣ್ಯ ವಿಭಾಗದ ಪದವಿ ತರಗತಿಯ ಹೆಚ್ಚು ಅಂಕಗಳಿಸಿದ ಸುಪ್ರಿತಾನವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ನವರು ಶಿವಮೊಗ್ಗದಲ್ಲಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಿದರು.

ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ 9ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ವಿಶ್ವವಿದ್ಯಾಲಯ ಉಪ ಕುಲಪತಿ ಆರ್. ಪಿ. ಜಗದೀಶ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ಜಿ.ಎಂ. ದೇವಗಿರಿ, ಮೂಡಗರೆ ಕೃಷಿ ಇಲಾಖೆಯ ಡೀನ್, ಮತ್ತು ಹಿರಿಯೂರು ‌ತೋಟಗಾರಿಕೆಯ ಇಲಾಖೆಯ ಡೀನ್ ಸೇರಿದಂತೆ ಪ್ರಾಧ್ಯಾಪಕ ವೃಂದ ಹಾಜರಿದ್ದರು.
ಎಂ.ಎಂ. ಸುಪ್ರಿತಾ ನವರು ಮರೂರು ಗ್ರಾಮದ ಹೆಚ್.ಸಿ. ಮಹದೇವ್ ,ಮಂಜಳಾ ದಂಪತಿಯ ಪುತ್ರಿಯಾಗಿರುತ್ತಾರೆ. ಇವರು ಈಗಾಗಲೇ ನಾಗರಿಕ ಸೇವಾ ಇಲಾಖೆಯ ವಿಭಾಗದ ಉನ್ನತ ಮಟ್ಟದ ತರಬೇತಿಯನ್ನು ಪಡೆದು ಉನ್ನತ ವ್ಯಾಸಂಗದ ಓದುವಿಕೆಯಲ್ಲಿ ತೊಡಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!