ಕುಶಾಲನಗರ, ಸೆ. 13: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ, ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಕಾಲೇಜಿನ ಉಪನ್ಯಾಸಕ ವೃಂದದವರಿಗೆ ಗುರು ಅಭಿವಂದನಾ ಕಾರ್ಯಕ್ರಮವು ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ .ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಡಾ. ರಾಧಾಕೃಷ್ಣನ್ ನವರ ಭಾವ ಚಿತ್ರಕ್ಕೆ ಪುಷ್ಪಾಂಚನೆ ಮಾಡುವ ಮೂಲಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಉಪಾಧ್ಯಕ್ಷ ಕೆ. ಕೆ. ನಾಗರಾಜಶೆಟ್ಟಿ ಮಾತಾನಾಡಿ ಪ್ರಜಾಪ್ರಭುತ್ವದ ಮೌಲ್ಯ ,ಸಿದ್ದಾಂತ ವಿದ್ಯಾರ್ಥಿಗಳ ಜೀವನದ ಆದರ್ಶಗಳನ್ನು ಒಳಗೊಳ್ಳುವ ಹಾಗೂ ಅನುಸರಿಸಿಕೊಳ್ಳುವ ಜನಾಂಗವನ್ನು ತಯಾರಿಸುವ ಗುರಿ ಗುರುಗಳದಾಗಿರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ಸಾಧಿಸಲು ಶಿಕ್ಷಣ ನೀಡಿದ ಗುರುಗಳು ಶಿಷ್ಯರಿಗೆ ವಿದ್ಯೆ ಬುದ್ಧಿ ನೀಡಿ ಸನ್ಮಾರ್ಗದತ್ತ ಕೊಂಡೊಯ್ಯವ ಗುರುವೃಂದವನ್ನು ಸ್ಮರೀಸುವುದು ಪುಣ್ಯದ ಕಾರ್ಯ, ಗುರು ನೀಡಿದ ವಿದ್ಯೆ ತನ್ನ ಕೊನೆಯ ಉಸಿರಿರುವ ತನಗ ಇರುತ್ತದೆ . ಅಂತಹ ಗುರುಗಳನ್ನು ನೆನೆಯುವುದು ಬಹು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಮಾತಾನಾಡಿ ಭವಿಷ್ಯದ ಕನಸು ನೆನೆಸಾಗಿಸಿಕೊಳ್ಳಲು ದಿಟ್ಟತನ ,ಛಲ, ಅಗತ್ಯವಾಗಿರುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಓದಿನ ಕಡೆಗೆ ಹೆಚ್ಚು ಒತ್ತು ನೀಡಿ ಹೆಚ್ಚು ಅಂಕಗಳನ್ನು ಗಳಿಸಿ, ಕಾಲೇಜಿಗೆ, ತಮ್ಮ ಪೋಷಕರಿಗೆ ಗೌರವ ತರುವಂತಾಗಬೇಕು, ಕಾಲೇಜು ಹಂತದಿಂದಲೇ ಉತ್ತಮ ವ್ಯಕ್ತಿ ತ್ವ,ಉದ್ದೇಶ, ಗುರಿಗಳನ್ನು ಮೈಗೊಂಡಿಸಿಕೊಂಡು ನಡೆದರೆ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಗುರುಗಳು ಬಯಸುವುದು ವಿದ್ಯಾರ್ಥಿಗಳ ಫಲಿತಾಂಶ, ಅದರ ಜೊತೆಯಲ್ಲಿ ಕಾಲೇಜಿನ ಶಿಸ್ತು, ಸಂಯಮಗಳಿಗೆ ವಿದ್ಯಾರ್ಥಿಗಳು ಅನುಸರಿಸಿಬೇಕು. ವಿಧ್ಯಾಭ್ಯಾಸದ ಪ್ರಗತಿ, ಕಾಲೇಜು ಅಭಿವೃದ್ಧಿಗೆ ಎಲ್ಲಾ ವಿದ್ಯಾರ್ಥಿಗಳ, ಪೋಷಕರು ಸಹಕಾರ ಮುಖ್ಯ ಎಂದರು.
ಗುರು ವಂದನಾ ಕಾರ್ಯಕ್ರಮದಲ್ಲಿ ಗುರುಗಳಿಗೆ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಉಪನ್ಯಾಸಕರಿಗೆ ಕೆ. ಕೆ. ನಾಗರಾಜಶೆಟ್ಟಿ, ಗಣೇಶ ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ಉಪನ್ಯಾಸಕರಾದ ರಮೇಶ್,, ಹನುಮರಾಜ್, ಸೂಸಿ, ಲಿನೆಟ್,ಗೌತಮಿ,ಪ್ರೇಕ್ಷತ್,ನಂದಿನಿ, ಅನುಷಾ ಲತಾ, ಕವಿತಾ, ಸೇರಿದಂತೆ ಸಿಬ್ಬಂದಿ ವರ್ಗ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Back to top button
error: Content is protected !!