ಟ್ರೆಂಡಿಂಗ್

ಮುಳ್ಳುಸೋಗೆ : ದೊಡ್ಡಮ್ಮ ಗ್ರಾಮದೇವತೆ ಕುಂಭಾಭಿಷೇಕ

ಕುಶಾಲನಗರ, ಮಾ 13: ಮುಳ್ಳುಸೋಗೆಯಲ್ಲಿರುವ ಮೂರು ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ 12 ನೇ ವರ್ಷದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.
ಮುಳ್ಳುಸೋಗೆ, ಗುಮ್ಮನಕೊಲ್ಲಿ ಹಾಗೂ ಜನತಾ ಕಾಲನಿ ಈ ಮೂರು ಗ್ರಾಮಗಳ ವ್ಯಾಪ್ತಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತರಾದರು.
ಎರಡು ದಿನಗಳ ಕಾಲ ನಡೆದ ದೇವತಾ ಪೂಜೋತ್ಸವದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ನವಗ್ರಹ ಹೋಮ, ಕಳಸಾಭಿಷೇಕ, ಮಹಾಪೂಜೆ, ಸಂಜೆ 7 ಗಂಟೆಗೆ ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಗ್ಬಲಿ ನೆರವೇರಿತು.
ಬಳಿಕ ಗುರುವಾರ ಬೆಳಗ್ಗೆ ಕಾವೇರಿ ನದಿಯಿಂದ ಕಳಶ ತರಲಾಯಿತು.
ಬಳಿಕ ಗಣಪತಿ ಹೋಮ, ದುರ್ಗಾ ಹೋಮ, ಪ್ರತಿಷ್ಠಾ ಕಳಸಾಭಿಷೇಕ, ಮಧ್ಯಾಹ್ನ 12-30 ಕ್ಕೆ ಮಹಾಮಂಗಳಾರತಿ ಹಾಗು ಅನ್ನಸಂತರ್ಪಣೆ ನೆರವೇರಿತು.
ದೈವಜ್ಞ
ಜಗದೀಶ್ ಉಡುಪ, ಸುಂಟಿಕೊಪ್ಪದ ಗಣೇಶ ಭಟ್, ಕೌಶಿಕ್ ಅವರಿಂದ ವಿವಿಧ ಹೋಮ ಹವನಾದಿಗಳು ನಡೆದವು.
ದೇವಾಲಯ ಸಮಿತಿ ಅಧ್ಯಕ್ಷ ಎಂ.ಎ.ಕುಮಾರಸ್ವಾಮಿ, ಉಪಾಧ್ಯಕ್ಷ ಧನರಾಜ್, ಕಾರ್ಯದರ್ಶಿ ಎಂ.ಹೆಚ್.ಅಣ್ಣೇಗೌಡ, ಸಹಕಾರ್ಯದರ್ಶಿ ಎಂ.ಮಂಜುನಾಥ್, ಖಜಾಂಚಿ ಸೋಮು, ನಿರ್ದೇಶಕರಾದ ಎಂ.ಕೆ.ಗಣೇಶ್, ಎಂ.ಆರ್.ನಂಜುಂಡ, ಗೋವಿಂದರಾಜು, ಡಿ.ಅಪ್ಪಣ್ಣ, ಎಂ.ಸಿ.ಮಂಜುನಾಥ್, ಪುಟ್ಟರಾಜು, ಜಯರಾಜ್, ವಿಶ್ವನಾಥ್, ಗಣಪತಿ, ಸೋಮು, ಎಂ.ಸಂತೋಷ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!