ಪ್ರಶಸ್ತಿ

ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘಕ್ಕೆ ಪ್ರಶಸ್ತಿ

ಕುಶಾಲನಗರ, ಆ.30: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ನೀಡಲ್ಪಡುವ ವಾರ್ಷಿಕ ಪ್ರಶಸ್ತಿಯಲ್ಲಿ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘವು ಸೋಮವಾರಪೇಟೆ ತಾಲ್ಲೂಕಿನ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದೆ.
ಸಹಕಾರ ಸಂಘದಲ್ಲಿ ಉತ್ತಮ ಕಾರ್ಯ ನಿರ್ವಹಣೆ, ರೈತರಿಗೆ ಸಾಲ ಸೌಲಭ್ಯಗಳ ವಿತರಣಾ ವ್ಯವಸ್ಥೆ, ವಾರ್ಷಿಕ ಲಾಭಾಂಶ ಸೇರಿದಂತೆ ಎಲ್ಲಾ ಮಾನದಂಡಗಳ ಅಧಾರದ, ನಬಾರ್ಡ್ ಬ್ಯಾಂಕ್ ನಿಂದ ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ದ್ವಿತೀಯ ಸ್ಥಾನದ ಪ್ರಶಸ್ತಿ ಪಡೆದಿದೆ.
ಪ್ರಶಸ್ತಿಯನ್ನು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್ ನ ಅಧ್ಯಕ್ಷ ಬಾಂಡ್ ಗಣಪತಿ  ಕೂಡುಮಂಗಳೂರು ಸಹಕಾರ ಸಂಘದ ಕೆ.ಕೆ. ಹೇಮಂತ್ ಕುಮಾರ್ ಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಸ್. ಅರುಣ್ ರಾವ್, ಕೆ.ಪಿ. ರಾಜು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿಯ ಸರ್ವ ನಿರ್ದೇಶಕರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!