ಕುಶಾಲನಗರ, ಆ 28: ಕುಶಾಲನಗರದ ಕೂಡ್ಲೂರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ಸಂಸ್ಥೆಯ ಸಿಬ್ಬಂದಿ ನೌಕರರು ಶಾಮೀಲಾಗಿ ಅಪಾರ ಪ್ರಮಾಣದ ಕಾಫಿ ಸಾಗಿಸಿ ಮಾರಾಟ ಮಾಡಿದ್ದಾರೆ. 50 ಲಕ್ಷ ಮೌಲ್ಯದ 17 ಟನ್ ಗಳಷ್ಟು ಕಾಫಿ ಕಳವು ನಡೆಸಿದರುವ ಬಗ್ಗೆ ಸಂಸ್ಥೆ ವ್ಯವಸ್ಥಾಪಕ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಮುಖ ಆರೋಪಿ ಸೂಪರ್ ವೈಸರ್ ಬೈಲುಕೊಪ್ಪ ನಿವಾಸಿ ಸುನಿಲ್ ತಲೆಮರೆಸಿಕೊಂಡಿದ್ದು ಸೆಕ್ಯುರಿಟಿ, ಲೋಡರ್ಸ್ ಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Back to top button
error: Content is protected !!