ಕ್ರೈಂ
ಮೊಬೈಲ್ ಮಳಿಗೆಗೆ ಕನ್ನ ಹಾಕಿ ಮೊಬೈಲ್, ನಗದು ದೋಚಿದ್ದ ಕಳ್ಳನ ಬಂಧನ

ಕುಶಾಲನಗರ, ಆ 28: ದಿನಾಂಕ: 24-08-2025 ರಂದು ಮಧ್ಯ ರಾತ್ರಿ ಸಮಯದಲ್ಲಿ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಫಲೀಲ್ ಎಂಬುವವರಿಗೆ ಸೇರಿದ HARMONY PHONES ಅಂಗಡಿಯ ರೋಲಿಂಗ್ ಶೆಟ್ರಸ್ ಮುರಿದು ವಿವಿಧ ಕಂಪನಿಯ ಅಂದಾಜು 32 ಹೊಸ ಮೊಬೈಲ್ ಫೋನ್ಗಳು ಮತ್ತು ರೂ.3000/- ನಗದು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 331(4), 305(ಎ) ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣ ಆರೋಪಿ ಪತ್ತೆಗಾಗಿ ಮಹೇಶ್ ಕುಮಾರ್.ಎಸ್, ಡಿಎಸ್ ಪಿ, ವಿರಾಜಪೇಟೆ ಉಪವಿಭಾಗ, ಶಿವರಾಜ ಆರ್.ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ, ಪ್ರದೀಪ್ ಕುಮಾರ್.ಬಿ.ಕೆ. ಪಿಎಸ್‌ಐ, ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ 28-08-2025 ರಂದು ಅಸ್ಸಾಂ ರಾಜ್ಯ ಮೂಲದ ಚಿಕ್ಕಮಗಳೂರು ಜಿಲ್ಲೆ ತೇಗೂರು ಗ್ರಾಮದ ನಿವಾಸಿಯಾದ ಜೋಹುರ್ ಆಲಿ, (28 ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
-
ವತಪಡಿಸಿಕೊಂಡ ಸ್ವತ್ತುಗಳ ವಿವರ: 32 ಮೊಬೈಲ್ ಫೋನ್‌ಗಳು,



