ಕಾಮಗಾರಿ
ಹಾರಂಗಿಯ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅಧಿಕಾರಿ ವೃಂದ

ಕುಶಾಲನಗರ ಮಾ 25 : ಕಾವೇರಿ ನೀರಾವರಿ ನಿಗಮದ ವತಿಯಿಂದ
ಹಾರಂಗಿ ಅಣೆಕಟ್ಟೆಯ ಹಿಂಭಾಗದಲ್ಲಿ ನಡೆಯುತ್ತಿರುವ ಹೂಳೆತ್ತುವಿಕೆ ತಡೆಗೊಡೆ, ಕಿರು ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ಮತ್ತು ಅಣೆಕಟ್ಟೆಯ ಸಮೀಪದಿಂದ 6ನೇ ತೂಬಿನವರೆಗೆ ನಡೆಯುತ್ತಿರುವ 49 ಕೋಟಿ ವೆಚ್ಚದ ಮುಖ್ಯ ನಾಲೆಯ ದುರಸ್ತಿ ಕಾರ್ಯವನ್ನು ಮೈಸೂರು ವಿಭಾಗದ ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ತಂಡ ಪರಿಶೀಲನೆ ನಡೆಸಿತು.
ಕಾವೇರಿ ನೀರಾವರಿ ನಿಗಮದ ಮೈಸೂರು ವಿಭಾಗದ ಮುಖ್ಯ ಇಂಜಿನಿಯರ್ ವೆಂಕಟೇಶ್ ನೇತೃತ್ವದ ತಙಡದಲ್ಲಿ ಕುಶಾಲನಗರ ಹಾರಂಗಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ, ಸಹಾಯಕ ಅಭಿಯಂತರ ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಇಂಜಿನಿಯರ್ ಸೌಮ್ಯ, ಸಿದ್ದರಾಜ್ ಸೇರಿದಂತೆ ಸಿಬ್ಬಂದಿ ವರ್ಗದವರು ಎರಡೂ ಕಡೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಉತ್ತಮ ಗುಣಮಟ್ಟವನ್ನು ಕಾಮಗಾರಿಯ ಕೊನೆಯವರಗೆ ಕಾಯ್ದುಕೊಂಡು ಮುಗಿಸುವಂತೆ ಗುತ್ತಿಗೆದಾರನಿಗೆ ಅಧಿಕಾರಿಗಳು ಸೂಚನೆ ನೀಡುವ ಮೂಲಕ ಹಂತ ಹಂತವಾಗಿ ಪರಿಶೀಲನೆ ನಡೆಸಿದರು.



