ಟ್ರೆಂಡಿಂಗ್

ಕಾಳುಮೆಣಸುನ್ನು ಕಳವು ಪ್ರಕರಣ: ಆರೋಪಿಗಳ ಬಂಧನ

ಕುಶಾಲನಗರ, ಮೇ 18: ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅರವತ್ತೋಕ್ಲು ಗ್ರಾಮ ನಿವಾಸಿಯಾದ  ಎಂ.ಸುಬ್ಬಯ್ಯ ರವರ ಮನೆಯ ಸಂಗ್ರಹಣಾ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಕಾಳುಮೆಣಸುನ್ನು ಮನೆಯಲ್ಲಿ ಯಾರು ಇಲ್ಲದಿರುವ ಸಂದರ್ಭ ಸಂಗ್ರಹಣಾ ಕೊಠಡಿಯ ಬಾಗಿಲು ಮುರಿದು ಅಂದಾಜು 450 ಕೆ.ಜಿ : 16-05-2024 0 5 ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಅಪರಾಧ ಕೃತ್ಯ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣಾ ಅಧಿಕಾರಿ/ಸಿಬ್ಬಂದಿಗಳು, ಅಪರಾಧ ಪತ್ತೆ ತಂಡ ಭೇಟಿ ನೀಡಿ ಮಾಹಿತಿ ಮತ್ತು ಸಾಕ್ಷಾಧಾರಗಳನ್ನು ಕಲೆಹಾಕಿ ದೂರುದಾರರು ನೀಡಿದ ಮಾಹಿತಿ ಅನ್ವಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಆರ್.ಮೋಹನ್‌ ಕುಮರ್, ಡಿಎಸ್‌ಪಿ, ವಿರಾಜಪೇಟೆ ಉಪ ವಿಭಾಗ, ಶ್ರೀ ಶಿವರಾಜ ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ ಹಾಗೂ ಶ್ರೀಮತಿ ರೂಪದೇವಿ ಬಿರಾದರ್, ಪಿಎಸ್‌ಐ & ಶ್ರೀ ಗೌರಿಶಂಕರ್, ಪಿಎಸ್‌ಐ ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 17-05-2024 ರಂದು ಆರವತ್ತೋ್ಕ್ಲು ಗ್ರಾಮ ನಿವಾಸಿಗಳಾದ 1) ಸುಬ್ರಮಣಿ, 24 ವರ್ಷ 2) ಮಂಜು, 25 ವರ್ಷ 3) ಬೆಳ್ಳಿ, 36 ವರ್ಷ, 4) ಕರ್ಪೆ, 49 ವರ್ಷ ಮತ್ತು 5) ಕುಶಾಲ, 19 ವರ್ಷ ಎಂಬುವವರುಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಹಾಗೂ ಕಳವು ಮಾಡಿದ್ದ 400 ಕೆ.ಜಿ ಕಾಳುಮೆಣಸು ಹಾಗೂ ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!