ಆರೋಪ

ಕೊಪ್ಪದಲ್ಲಿ ಖಾಸಗಿ ಲೇಔಟ್ ನಲ್ಲಿ ಮರಗಳ‌ಮಾರಣ ಹೋಮ: ರೈತ ಸಂಘ ಆಕ್ರೋಷ

ಕುಶಾಲನಗರ, ಆ 18: ಕುಶಾಲನಗರ ಮೈಸೂರು ಮುಖ್ಯ ರಸ್ತೆಯ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾರತ ಮಾತಾ ಸ್ಕೂಲ್ ಪಕ್ಕದಲ್ಲಿ ಇರುವ ಸ್ಕಂದ ಲೇಔಟ್ ನಲ್ಲಿ 50 ರಿಂದ 60 ಮರಗಳ ಮಾರಣ ಹೋಮ ನಡೆದಿದೆ ಎಂದು ರೈತ ಸಂಘದ ಮುಖಂಡ ಆರೋಪಿಸಿದ್ದಾರೆ.

ಬಂಜರು ಭೂಮಿಯಾಗಿ ಕಾಣುವ ಸ್ಕಂದ ಲೇಔಟ್ ನ ಮರ ಕಡಿದವರಿಗೆ ಸೂಕ್ತ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ( ರಿ ) ರೈತ ಬಣ
ರಾಜ್ಯ ಪ್ರಧಾನ ಸಂಚಾಲಕ ಡಾ. ಅರುಣ್ ಕುಮಾರ್ ಆಗ್ರಹ

ಸ್ಕಂದ ಲೇಔಟ್ ಮೈಸೂರು ಮತ್ತು ಕುಶಾಲನಗರ ಮುಖ್ಯ ರಸ್ತೆಯಲ್ಲಿ ನೂರಾರು ಎಕರೆ ಮಾನವನ ವಾಸ ಸ್ಥಳ ಮಾಡಿ ಕೊಟ್ಟಂತಹ ಯೋಗ್ಯವಾದಂತ ಪ್ರದೇಶ ಇಂತಹ ಪ್ರದೇಶದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಗಳು ಪ್ರಕೃತಿಯ ಮರ ಗಿಡಗಳ ಬೆಳೆಸುವಿನಲ್ಲಿ ಉನ್ನತ ಮಟ್ಟದ ಸಹಕಾರಗಳ ನೀಡುತ್ತವೆ.
ಯಾವುದೇ ಒಂದು ಲೇಔಟ್ ಆಗಬೇಕೆಂದರೆ ಅಲ್ಲಿ ಸ್ಮಶಾನ ಪಾರ್ಕ್ ಮತ್ತು ಮರ ಗಿಡಗಳ ಅವಶ್ಯಕತೆ ಉಂಟು. ಈ ಜಾಗತಿಕ ಮಟ್ಟದಲ್ಲಿ ನಗರೀಕರಣಗಳು ಪ್ರಭುದ್ಧವಾಗಿ ಬೆಳೆಯುತ್ತಿವೆ ಇಂತಹ ಸಂದರ್ಭದಲ್ಲಿ ಒಂದು ಲೇಔಟ್ ಮಾಡಬೇಕಾದರೆ ಮೊದಲನೇದಾಗಿ ಗಿಡಗಳನ್ನು ನೆಟ್ಟಿರುತ್ತಾರೆ. ಗಿಡಗಳು ದೊಡ್ಡ ಮರಗಳಾಗಿ ಬೆಳೆದಿರುತ್ತದೆ .
ಇಲ್ಲಿ ಇವರುಗಳು ಬುಡ ಸಮೇತ ಕಟಿಂಗ್ ಮಿಷನಲ್ಲಿ ಮರವನ್ನ ಕಟ್ ಮಾಡಿ ಬಿಸಾಕಿದ್ದಾರೆ ಇದಕ್ಕೆ ಯಾರು ಹೊಣೆ ಪ್ರಸ್ತುತ ಸಮಾಜದಲ್ಲಿ ಆಕ್ಸಿಜನ್ ಮನುಷ್ಯನಿಗೆ ತುಂಬಾ ಉಪಯುಕ್ತವಾದಂತದ್ದು ಇಂಥ ಸಂದರ್ಭದಲ್ಲಿ ಇವರುಗಳು ಮೃದಕಾರದ ಮರಗಳನ್ನು ಕೆಇಬಿಯ ನೆಪವೊಡ್ಡಿ ಲೈನ್ ಗಳಿಗೆ ತಾಕುತ್ತವೆ ಎಂದು ಮರಗಳನ್ನು ಮಾರಣಹೋಮ ಮಾಡಿರುತ್ತಾರೆ. ನಾವು ಕೆಇಬಿಯ ಎ ಇ ಯನ್ನು ಕೇಳಿದರೆ ನಾನು ಯಾವುದೇ ಕಾರಣಕ್ಕೂ ಬುಡ ಸಮೇತ ಮರವನ್ನ ಕಡಿಯುವುದಕ್ಕೆ ಅಪ್ಪಣೆಯನ್ನು ಕೊಟ್ಟಿಲ್ಲ ಎಂದು ಹೇಳುತ್ತಾರೆ .
ಈ ಪ್ರಕೃತಿಗೆ ಪೂರಕವಾದಂತಹ ಬೃದಾಕಾರದ ಮರಗಳನ್ನು ಕಡಿದವರಿಗೆ ಕಾನೂ ರೀತಿಯಲ್ಲಿ ಸೂಕ್ತ ಕ್ರಮಗಳು ಕೈಗೊಳ್ಳಬೇಕು
ಎಂದು ಕರ್ನಾಟಕ ರಾಜ್ಯ ರೈತ ಸಂಘ (ರಿ ) ರೈತ ಬಣ ಸಂಸ್ಥಾಪಕರಾದ ಇಂಗಲಗುಪ್ಪೆ ಕೃಷ್ಣೇಗೌಡರ ನೇತೃತ್ವದಲ್ಲಿ ರಾಜ್ಯ ಪ್ರಧಾನ ಸಂಚಾಲಕರಾದ ಡಾ. ಅರುಣ್ ಕುಮಾರ್ ಆಗ್ರಹವನ್ನು ಮಾಡುತ್ತೇನೆ. ಎರಡು ಮೂರು ದಿನಗಳಲ್ಲಿ ಬುಡ ಸಮೇತ ಮರವನ್ನ ತೆಗೆದ ಜಾಗದಲ್ಲಿ ಮತ್ತೊಂದು ಗಿಡವನ್ನು ಬೆಳೆಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!