ಕಾರ್ಯಕ್ರಮ
ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣ ಕಾರ್ಯಕ್ರಮ


ಕುಶಾಲನಗರ, ಜ 01:ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಇಂದು ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣ ಕಾರ್ಯಕ್ರಮವನ್ನು ವಿಶ್ವಕರ್ಮ ಸಮಾಜದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದಂತ ಶ್ರೀಯುತ ವೀರಣ್ಣ ಅರ್ಕಸಾಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕರ್ನಾಟಕದ ಶಿಲ್ಪಿಗಳು ದೇಶದಾದ್ಯಂತ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತ ಗೊಳಿಸುವಲ್ಲಿ ವಿಶ್ವಕರ್ಮ ಸಮಾಜದವರು ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿರುತ್ತಾರೆ. ಇಂದು ಆ ಶಿಲ್ಪಿಗಳನ್ನು ಗುರುತಿಸುವಲ್ಲಿ ಸರ್ಕಾರವು ಕೂಡ ಮುಖ್ಯ ಪಾತ್ರವನ್ನು ವಹಿಸಿದ್ದು ಅವರ ನೆನಪಿಗಾಗಿ ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣ ದಿನಾಚರಣೆಯನ್ನು ಆಚರಿಸುವಲ್ಲಿ ಕರ್ನಾಟಕ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಶ್ರೀ ಲಿಂಗಮೂರ್ತಿ ಎಚ್ ಬಿ ಅಧ್ಯಕ್ಷತೆ ವಹಿಸಿದ್ದರು ಗೌರವಾಧ್ಯಕ್ಷರಾದ ವಿ ಕುಮಾರ್ ಉಪಾಧ್ಯಕ್ಷರಾದ ಶ್ರೀ ದುರ್ಗೇಶ್ ಕಾರ್ಯದರ್ಶಿಗಳಾದ ಎಚ್ ಬಿ ರಾಜಮೂರ್ತಿ ಹಿರಿಯವರಾದ ಶ್ರೀ ನಾಗಾಚಾರಿ ಹೆಚ್ಎನ್ ಮತ್ತು ವಿಶ್ವಕರ್ಮ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಲಿತ ವರದರಾಜ್ ಹಾಗೂ ಇತರ ಮಹಿಳಾ ಸದಸ್ಯರು ಗಳುಸಮಾಜದ ಅನೇಕ ಮುಖಂಡರುಗಳು ಭಾಗವಹಿಸಿದ್ದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ವೀರಣ್ಣ ಅರ್ಕಸಾಲಿಯವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು