ಸುದ್ದಿಗೋಷ್ಠಿ

ನಾಳೆ ಕುಶಾಲನಗರದಲ್ಲಿ ಶ್ರೀ ಗಣಪತಿ ರಥೋತ್ಸವ: ಜಾತ್ರೆ ಆರಂಭ: ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ

ಕುಶಾಲನಗರ, ನ 07:ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ರಥೋತ್ಸವ ನವೆಂಬರ್ 8 ರಂದು ಶನಿವಾರ ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು.

ದೇವಾಲಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ರಥೋತ್ಸವ ಬಳಿಕ ಸಾವಿರಾರು ಭಕ್ತರಿಗೆ ಅನ್ನದಾನ ನಡೆಯಲಿದೆ‌. ವಾರ್ಷಿಕ ರಥೋತ್ಸವ ಅಂಗವಾಗಿ ನವೆಂಬರ್ 5 ರಿಂದ ನವೆಬರ್ 14 ರ ತನಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನ.9 ರಂದು ವೃಷಭ ವಾಹನ ಸೇವೆ ಮಂಟಪೋತ್ಸವ 10ರಂದು ಅಶ್ವರೂಡ ಸೇವೆ ಹೂವಿನ ಪಲ್ಲಕ್ಕಿ ಮಂಟಪೋತ್ಸವ 11 ರಂದು ಮಯೂರರೂಢ ಸೇವೆ,
ನವಂಬರ್ 14 ರಂದು ಹೋಮ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಮಾಪ್ತಿ ಗೊಳ್ಳಲಿದೆ. ನವೆಂಬರ್ 8 ರಿಂದ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗೋಪ್ರದರ್ಶನ ಸಂದರ್ಭ ನ 14 ರಂದು ವಿವಿಧ ಇಲಾಖೆಗಳದ ಮಾಹಿತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಅಮ್ಯೂಸ್ಮೆಂಟ್ ಪಾರ್ಕ್ ಗುತ್ತಿಗೆದಾರ ಹೆಚ್.ಡಿ.ಚಂದ್ರು ಮಾತನಾಡಿ,
ಜಾತ್ರೋತ್ಸವ ಅಂಗವಾಗಿ ದೇವಾಲಯ ಸೇರಿದಂತೆ ಪಟ್ಟಣದ ಹೆದ್ದಾರಿ, ಪ್ರಮುಖ ಬೀದಿಗಳು ಆಕರ್ಷಕ ವಿದ್ಯುತ್ ಅಲಂಕಾರದಿಂದ ದಸರಾ ಮಾದರಿಯಲ್ಲಿ ಅಳವಡಿಸಲಾಗಿದೆ. ಜಾತ್ರಾ ಮೈದಾನದಲ್ಲಿ ವಿವಿಧ ಆಕರ್ಷಕ  ಮನರಂಜನಾ ಚಟುವಟಿಕೆಗಳಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.
ಸಮಿತಿ ಖಜಾಂಚಿ ಎಸ್.ಕೆ.ಸತೀಶ್ ಮಾತನಾಡಿ, ನವೆಂಬರ್ 12 ರಿಂದ ಎರಡು ದಿನಗಳ ಕಾಲ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಗೋ ಪ್ರದರ್ಶನ ಮತ್ತು ಉತ್ತಮ ರಾಸುಗಳ ಆಯ್ಕೆ ಕಾರ್ಯ ನಡೆದು ನವೆಂಬರ್ 14 ರಂದು ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಸಾಕು ಪ್ರಾಣಿಗಳ ಪ್ರದರ್ಶನಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗಣಪತಿ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್, ನಿರ್ದೇಶಕ ಹೆಚ್.ಎಂ. ಚಂದ್ರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!