ಸಭೆ

ಕುಶಾಲನಗರ ಸ.ಮಾ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ

ಕುಶಾಲನಗರ, ಜೂ 03: ಕೊಡಗಿನ ಇತಿಹಾಸ ಪ್ರಸಿದ್ದ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ವಿಧ್ಯಾರ್ಥಿಗಳ ಸಂಘದ ಸಭೆ ಸಂಘದ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು,
ಶಾಲೆಯ ಪ್ರಾರಂಭದ ವರ್ಷಗಳು 1834 ಮತ್ತು 1864 ರಲ್ಲಿನ ಎರಡು ರೀತಿಯ ಧಾಖಲೆಗಳಿರುವುದರಿಂದ ಸುದೀರ್ಘ ಚರ್ಚೆಯ ನಂತರ 1864 ಇಸವಿಯನ್ನೆ ಅಂತಿಮ ಗೊಳಿಸಿ ಗೊಂದಲಗಳಿಗೆ ತೆರೆ ಎಳೆಯಲಾಯಿತು,
ಸದಸ್ಯತ್ವ ಅಭಿಯಾನದ ಬಗ್ಗೆ ಚರ್ಚಿಸಿ ಶಾಲೆಯ ಸಾವಿರಾರು ವಿಧ್ಯಾರ್ಥಿಗಳನ್ನು ಸಂಘಟಿಸಿ ಶತಮಾನೋತ್ಸವ ಅಂಗವಾಗಿ ಭವ್ಯ ಸಭಾಂಗಣವೊಂದನ್ನು ನಿರ್ಮಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ವಿ. ಪಿ. ಶಶಿಧರ್, ಸುಮಾರು 160 ವರ್ಷಗಳಿಗೂ ಹಿರಿಯದಾದ ಶಾಲೆಯ ಶತಮಾನೊತ್ಸವವನ್ನು ತುಂಬಾ ತಡವಾಗಿ ಆಚರಿಸುತ್ತಿದ್ದರೂ ಕಾರ್ಯಕ್ರಮ ವಿಭಿನ್ನವಾಗಿರಬೇಕೆಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರ ಬಾಬು,ಖಜಾಂಚಿ ಎಸ್. ಕೆ ಸತೀಶ್,ಸದಸ್ಯರಾದ ಜೋಸೆಫ್ ಸೋನ್ಸ್ ವಿಕ್ಟರ್,ನಾಗೇಂದ್ರ ಪ್ರಸಾದ್,ವಿ. ಎಸ್. ಆನಂದಕುಮಾರ್ ಸಲಹೆ ನೀಡಿದರು. ಕಾರ್ಯದರ್ಶಿ ಮೊಯಿದ್ದೀನ್,ನಾರಾಯಣ,ಮಾಧ್ಯಮ ಕಾರ್ಯದರ್ಶಿ ಲೋಕೇಶ್ ಸಾಗರ್,ದೇವರಾಜು ಚಂದ್ರು,ರವಿಕುಮಾರ್ ಸಭೆಯಲ್ಲಿ ಬಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!