ಕುಶಾಲನಗರ, ಜು 30: ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ನಿಯೋಜನೆಗೊಂಡ ಎನ್.ಎಂ.ರವಿ ಕಾಳಪ್ಪ ಅವರು ಅಧಿಕಾರ ವಹಿಸಿಕೊಂಡು ಜಿಲ್ಲೆಗೆ ಆಗಮಿಸಿದ ಸಂದರ್ಭ ಪಕ್ಷದ ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದರು.
ಕೊಡಗು ಗಡಿ ಕೊಪ್ಪ ಕಾವೇರಿ ಪ್ರತಿಮೆ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರವಿಕಾಳಪ್ಪ ಅವರಿಗೆ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು.
ಈ ಸಂದರ್ಭ ಕಾವೇರಿ ಮಾತೆಗೆ ನಮನ ಸಲ್ಲಿಸಿ ರವಿ ಕಾಳಪ್ಪ ಆಶೀರ್ವಾದ ಪಡೆದರು.
ಈ ಸಂದರ್ಭ ಜಿಲ್ಲಾ
ನಂತರ ಮಾತನಾಡಿದ ರವಿಕಾಳಪ್ಪ, ಪಕ್ಷಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ಬಿಜೆಪಿ ಸರಕಾರ ತನಗೆ ಈ ಸ್ಥಾನಮಾನ ಒದಗಿಸಿದೆ. ಇದು ಜಿಲ್ಲೆಯ ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಸಾಧ್ಯವಾಯಿತು ಎಂದು ಧನ್ಯವಾದ ಸಲ್ಲಿಸಿದರು. ಅಧ್ಯಕ್ಷರಾದ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಜಿಪಂ ಮಾಜಿ ಅಧ್ಯಕ್ಷ ಹರೀಶ್ ಸೇರಿದಂತೆ ಪಕ್ಷದ ಪ್ರಮುಖರಾದ ಬಿ.ಅಮೃತ್ರಾಜ್, ಉಮಾಶಂಕರ್, ಎಂ.ಡಿ.ಕೃಷ್ಣಪ್ಪ, ಎಂ.ಎಂ.ಚರಣ್, ಬೋಸ್ಮೊಣ್ಣಪ್ಪ, ವೈಶಾಖ್, ಪುಂಡರೀಕಾಕ್ಷ, ಮಂಜುಳಾ ಮತ್ತಿತರರು ಇದ್ದರು.
Back to top button
error: Content is protected !!