ಕ್ರೈಂ

ಎಂಡಿಎಂಎ ಮಾರಾಟ/ಸರಬರಾಜು: ಓರ್ವನ ಬಂಧನ

ಕುಶಾಲನಗರ, ಮೇ 15:ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪೇಟೆಯಲ್ಲಿರುವ ಎ.ವಿ ಶಾಲೆ ಕಡೆಯಿಂದ ಅಬ್ಬಿಫಾಲ್ಸ್ ಕಡೆಗೆ ಹೋಗುವ ಜಂಕ್ಷನ್‌ನಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಮಾರಾಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸೂರಜ್,ಪಿ.ಎ, ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ರಾಜು.ಪಿ.ಕೆ. ಸಿಪಿಐ, ಮಡಿಕೇರಿ ನಗರ ವೃತ್ತ, ಅನ್ನಪೂರ್ಣ.ಎಸ್.ಶಂಕರಗುಳ್ಳಿ, ಪಿಎಸ್‌ಐ, ಮಡಿಕೇರಿ ನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 14-05-2025 ರಂದು ಮಹದೇವಪೇಟೆಯಲ್ಲಿರುವ ಎ.ವಿ ಶಾಲೆ ಕಡೆಯಿಂದ ಅಬ್ಬಿಫಾಲ್ಸ್ ಕಡೆಗೆ ಹೋಗುವ ಜಂಕ್ಷನ್‌ನಲ್ಲಿ ನಿಷೇಧಿತ ಮಾದಕ ವಸ್ತು MDMA ಮಾರಾಟ/ಸರಬರಾಜು ಮಾಡುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿ ಮಡಿಕೇರಿ ನಗರದ ಅಬ್ದುಲ್ ಕಲಾಂ ಬಡಾವಣೆ ನಿವಾಸಿಯಾದ ಮೊಹಮ್ಮದ್ ಶರ್ಚಿಲ್, (41 ವರ್ಷ) ಎಂಬಾತನನ್ನು 3.66 ಗ್ರಾಂ MDMA ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!