ಕ್ರೀಡೆ

ಭಾರತ-ಪಾಕ್ ಸಂಘರ್ಷ: ಐಪಿಎಲ್-2025 ರದ್ದು

ಕುಶಾಲನಗರ, ಮೇ 09: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಐಪಿಎಲ್​ 2025ರ ಅನ್ನು ಅರ್ಧಕ್ಕೆ ರದ್ದುಗೊಳಿಸಲಾಗಿದೆ.

ಪಹಲ್ಗಾಮ್​ ಉಗ್ರ ದಾಳಿ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾಗಿದ್ದ ಭಾರತ ಬುಧವಾರ ತಡರಾತ್ರಿ ಪಾಕಿಸ್ತಾನದ 9 ಸ್ಥಳಗಳಲ್ಲಿ ಕ್ಷಿಪಣಿ ದಾಳಿ ನಡೆಸಿ ಉಗ್ರರ ಅಡುಗುತಾಣಗಳನ್ನು ಧೂಳೀಪಟ ಮಾಡಿತ್ತು. ಇದಕ್ಕೆ ಪ್ರತಿಯಾಗಿ ನಿನ್ನೆ ದಿನ ಪಾಕಿಸ್ತಾನ ಸೇನೆ ಭಾರತದ ಗಡಿ ಪ್ರದೇಶಗಳಲ್ಲಿ ಡ್ರೋನ್​ ದಾಳಿ ನಡೆಸಿತ್ತು. ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ನಡುವಿನ ಪಂದ್ಯವನ್ನೂ ಅರ್ಧಕ್ಕೆ ನಿಲ್ಲಿಸಲಾಯಿತು.

ಇದರ ಬೆನ್ನಲ್ಲೇ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸಿದ್ದು, ಆಟಗಾರರು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಐಪಿಎಲ್​ 2025ರ ಸೀಸನ್​ ಅನ್ನು ರದ್ದುಗೊಳಿಸಿ ಆದೇಶ ಮಾಡಿದೆ. ಈವರೆಗೂ ಐಪಿಎಲ್​ನಲ್ಲಿ 58 ಪಂದ್ಯಗಳು ಮುಕ್ತಾಯಗೊಂಡಿದ್ದವು. ಲೀಗ್ ಹಂತದಲ್ಲಿ ಇನ್ನೂ 12 ಪಂದ್ಯಗಳು ಬಾಕಿ ಉಳಿದಿದ್ದವು. ಲಕ್ನೋ, ಹೈದರಾಬಾದ್, ಅಹಮದಾಬಾದ್, ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಜೈಪುರ ನಗರಗಳಲ್ಲಿ ಉಳಿದ ಪಂದ್ಯಗಳು ನಡೆಯಬೇಕಿತ್ತು. ಇವುಗಳಲ್ಲಿ ಮೂರು ಪಂದ್ಯಗಳು ಅಹಮದಾಬಾದ್‌ನಲ್ಲಿ, ತಲಾ ಎರಡು ಪಂದ್ಯಗಳು ಲಕ್ನೋ ಮತ್ತು ಬೆಂಗಳೂರಿನಲ್ಲಿ ಮತ್ತು ತಲಾ ಒಂದು ಪಂದ್ಯ ಹೈದರಾಬಾದ್, ದೆಹಲಿ, ಚೆನ್ನೈ, ಮುಂಬೈ ಮತ್ತು ಜೈಪುರದಲ್ಲಿ ನಡೆಯುವುದು ಬಾಕಿ ಇತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!