ಕಾರ್ಯಕ್ರಮ

ಕುಶಾಲನಗರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಕುಶಾಲನಗರ, ಜೂ 27: ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಪತ್ತಿನ ಸಹಕಾರ ಸಂಘದ  ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ ನಡೆಯಿತು.
ಸಂಘ ಅಧ್ಯಕ್ಷ ಎಂ.ಕೆ.ದಿನೇಶ್ ನೇತೃತ್ವದಲ್ಲಿ ನಡೆದ ‌ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸಮುದಾಯ ಬಾಂಧವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು.
ಕೆಂಪೇಗೌಡ ರ ಕೊಡುಗೆಗಳ ಬಗ್ಗೆ ಎಂ.ಕೆ.ದಿನೇಶ್ ಮಾತನಾಡಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಎಂ.ಎಂ.ಪ್ರಕಾಶ್, ಖಜಾಂಚಿ ಅರುಣ್ ಚಂಗಪ್ಪ, ನಿರ್ದೇಶಕರಾದ ವಿ.ಜೆ.ನವೀನ್ ಗೌಡ, ಗೌತಮ್, ಎಂ.ಡಿ.ಕೃಷ್ಣಪ್ಪ, ಜಿ.ಬಿ.ಜಗದೀಶ್, ಗಿರೀಶ್, ಗಾಯತ್ರಿ, ಭಾನುಪ್ರಕಾಶ್, ಸಹಕಾರ ಸಂಘದ ನಿರ್ದೇಶಕಿ ರೇಖಾ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!