
ಕುಶಾಲನಗರ ಏ 27: ಆವರ್ತಿಯ ಮಹದೇವಪ್ಪ ಅವರ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಹೀಗೆ ಲಲಿತಕಲೆಗಳ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ ೭೦ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿಯನ್ನು ಘೋಷಿಸಲಾಯಿತು. ಮುಂದಿನ ದಿನಮಾನಗಳಲ್ಲಿ, ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹೆತ್ತ ತಂದೆ-ತಾಯಿ, ಪೋಷಕರಿಗೆ ಅಕ್ಷರಭ್ಯಾಸ ನೀಡಿದ ಗುರುಗಳಿಗೆ ಹುಟ್ಟಿದ ಊರಿಗೆ, ಕೀರ್ತಿ ತರಲಿ ಎಂದು ಶುಭಹಾರೈಸಿ ಅಭಿಮಾನದಿಂದ ಅಭಿನಂದಿಸಿ ಪ್ರಶಸ್ತಿ ಹಾಗೂ ಸನ್ಮಾನ ಪತ್ರ ಹಸ್ತಾಂತರಿಸಲಾಯಿತು.
Back to top button
error: Content is protected !!