ಅಪಘಾತ

ಕೂಡಿಗೆ ಆಟೋ ಚಾಲಕ ಟಿ.ನರಸೀಪುರದಲ್ಲಿ ದುರ್ಮರಣ

ಕುಶಾಲನಗರ, ಏ. 23: ಕೂಡಿಗೆ ನಿವಾಸಿಯಾಗಿದ್ದ ಆಟೋ ಚಾಲಕ ಮಹದೇವ (50) ಎಂಬುವರು ತಿ ನರಸಿಪುರದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತನ್ನ ಆಟೋದಲ್ಲಿ ಮೈಸೂರು- ಟೀ‌ ನರಸೀಪುರ ಮುಖ್ಯ ರಸ್ತೆಯಲ್ಲಿ ಕೊಳ್ಳೇಗಾಲದ ಸಮೀಪದ ತನ್ನ ಸ್ವತಃ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಅಪರಿಚಿತ ವಾಹನಕ್ಕೆ ಮುಖಾಮುಖಿ  ಡಿಕ್ಕಿ ಹೊಡೆದ ಪರಿಣಾಮವಾಗಿ ಮಹದೇವ ಸ್ಧಳದಲ್ಲಿ ಮೃತಪಟ್ಟಿದ್ದಾರೆ.

ಮಹದೇವ ಕೂಡಿಗೆಯಲ್ಲಿ ಆಟೋ ಚಾಲಕರಾಗಿದ್ದು ಸಹಕಾರ ಸಂಘದ ಮಳಿಗೆಯಲ್ಲಿ ಚಹಾ ಅಂಗಡಿಯನ್ನು ನಡೆಸುತ್ತಿದ್ದರು. ಮೃತರು ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಟೀ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!