ಕಾರ್ಯಕ್ರಮ

ಯಡವನಾಡಿನಲ್ಲಿ ಎಂಜಿಎಂ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ

ಕುಶಾಲನಗರ, ಮಾ 24 : ಸುಭದ್ರ ಹಾಗು ಸಮೃದ್ದ ರಾಷ್ಟ್ರ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರವಹಿಸುತ್ತದೆ ಎಂದು ಕುಶಾಲನಗರದ ಉದ್ಯಮಿ ಸುಘುರಾಜ್ ಆಶಿಸಿದರು.
ಯಡವನಾಡು ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು
ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಕೆ.ಬಸವರಾಜು ಮಾತನಾಡಿ
ಶಿಬಿರಗಳು ವಿದ್ಯಾರ್ಥಿಗಳಲ್ಲಿ ಪಕ್ವತೆ ಹಾಗೂ ಪ್ರಬುದ್ಧತೆಯನ್ನು ಮೂಡಿಸುತ್ತದೆ.
ವಿದ್ಯಾರ್ಥಿಗಳು ಪರಸ್ಪರ ಒಳಿತಿನತ್ತ ಚಿಂತನೆ ನಡೆಸಲು ಹಾಗೂ ಗ್ರಾಮೀಣ ಜನರ ಬದುಕು ಬವಣೆಗಳನ್ನು ಅರಿಯಲು ಬಸವರಾಜು ಕರೆಕೊಟ್ಟರು.
ಕೊಡಗು ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಮನುಷ್ಯನಿಗೆ ಪ್ರಕೃತಿ ಉಚಿತವಾಗಿ ನೀಡಿರುವ ಗಾಳಿ, ಬೆಳಕು, ಮಣ್ಣು ಹಾಗೂ ನೀರನ್ನು ಮಲಿನವಾಗದಂತೆ ಜೋಪಾನ ಮಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ನಡೆಯಬೇಕಿದೆ ಎಂದರು.
ಯಡವನಾಡು ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಖ್ಯ ಶಿಕ್ಷಕ ಎನ್.ಸಿ.ರಜನಿಕಾಂತ್ ಮಾತನಾಡಿದರು.
ಶಿಬಿರಾಧಿಕಾರಿ ಕೆ.ಆರ್.ಮಂಜೇಶ್
ಶಿಬಿರದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜು ಅಭಿವೃದ್ದಿ ಸಮಿತಿ ನಿರ್ದೇಶಕ ಎನ್.ಎನ್.ನಂಜಪ್ಪ, ಕಾಲೇಜು ಪ್ರಾಂಶುಪಾಲೆ ಟಿ.ಎ.ಲಿಖಿತಾ,
ಸಹಶಿಬಿರಾಧಿಕಾರಿ ದಿನೇಶ್ ಕುಮಾರ್, ಉಪನ್ಯಾಸಕರಾದ ನಮಿತ,ದೇವೇಂದ್ರ, ಲಾವಣ್ಯ, ಸಾನಿಯಾ ಇದ್ದರು.
ಪ್ರಾಂಶುಪಾಲೆ ಲಿಖಿತಾ ಸ್ವಾಗತಿಸಿದರು.
ಉಪನ್ಯಾಸಕ ದೇವೇಂದ್ರ ನಿರೂಪಿಸಿದರು.
ಬಿ.ಜೆ.ಭವ್ಯ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!