ಅಪಘಾತ

ಮರದ ಕೊಂಬೆ ಬಿದ್ದು ಕಾರ್ಮಿಕ ದುರ್ಮರಣ

ಸೋಮವಾರಪೇಟೆ, ಮೇ 05:  ಮರ ಕಡಿಯುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಕಾರ್ಮಿಕ ಸಾವನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕು ಎಡವಾರ ಗ್ರಾಮದ ನಿವಾಸಿ ಮಿತ್ರೇಶ್ (43) ಸಾವನ್ನಪ್ಪಿದ ದುರ್ದೈವಿ.

ಭಾನುವಾರ 12.30ರ ಸಮಯದಲ್ಲಿ ಘಟನಾ ಸ್ಥಳದಲ್ಲಿ ಮರ ಕಡಿಯುತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಯಂತ್ರಣವನ್ನು ಕಳೆದುಕೊಂಡು ಮತ್ತೊಂದು ಮರಕ್ಕೆ ಕಟ್ಟಿದ ಹಗ್ಗವು ಜಾರಿ ಮರದ ಕೊಂಬೆಯು ಇವರ ಮೇಲೆ ಅಪ್ಪಳಿಸಿದೆ. ಘಟನೆಯಿಂದ ಮಿತ್ರೇಶ್ ಗೆ ತೀವ್ರ ರೀತಿಯಾದ ಗಾಯಗಳಾಗಿದ್ದು ಸ್ಥಳದಲ್ಲಿಯೇ ಅಸುನೀಗಿರುತ್ತಾರೆ. ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!