ಕ್ರೈಂ

ಕರಿಮೆಣಸು ಕಳವು, ಜಾನುವಾರು ಸಾಗಾಟ: ಆರೋಪಿಗಳ ಬಂಧನ

ಕುಶಾಲನಗರ, ಮಾ 16:ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ನಿವಾಸಿ ಎಂ.ಎಂ. ಉತ್ತಯ್ಯ ರವರಿಗೆ ಸೇರಿದ ಕಣದಲ್ಲಿ ದಿ: 21-12-2026 ರಂದು ಅಂದಾಜು 15 ಚೀಲ ಹಾಗೂ ಚೆನ್ನಂಗೊಲ್ಲಿ ಹೆಬಾಲೆ ಗ್ರಾಮದ ನಿವಾಸಿಯಾದ ಟಿ.ಹೆಜ್.ಹನೀಫ್ ರವರಿಗೆ ಸೇರಿದ ಕಣದಲ್ಲಿ 19-02-2026 ರಂದು ಅಂದಾಜು 11 ಚೀಲ ಕರಿಮೆಣಸು ಅನ್ನು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: Mi3(2) ಬಿಎನ್ಸ್ ಆಕ್ಟ್ ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಹಾಗೂ ತಿತಿಮತಿ ಉಪಠಾಣೆ ಸಮೀಪ ಹೆದ್ದಾರಿಯಲ್ಲಿ

ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸುವ ಸಂದರ್ಭ ಒಂದು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಸದರಿ ವಾಹನವನ್ನು ಪರಿಶೀಲಿಸಿದಾಗ ಎರಡು ಎತ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದಿರುತ್ತದೆ. ಈ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 4, 5, 6, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ & ಸಂರಕ್ಷಣಾ ಕಾಯ್ದೆ & 11(1) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಮೂರು ಪ್ರಕರಣಗಳ ಆರೋಪಿಗಳನ್ನು ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಮಾಹಿತಿ ಸಂಗ್ರಹಿಸಿ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಆರೋಪಿಗಳ ವಿವರ:

1. ಕೆ.ಎಂ.ಉವೈದ್, 36 ವರ್ಷ, ಚೆನ್ನಯ್ಯನಕೋಟೆ, ವಿರಾಜಪೇಟೆ ತಾ।

2. ಅಬ್ದುಲ್ ರೆಹಮಾನ್.ಪಿ, 34 ವರ್ಷ, ಕಾಟಿಕೊಳಂ, ಮಾನಂದವಾಡಿ ತಾ।, ಕೇರಳ ರಾಜ್ಯ

1. ಪಿ.ಎಂ.ಮುಜಿಬ್, 36 ವರ್ಷ, ಕೊಟ್ಟಮುಡಿ, ನಾಪೋಕ್ಲು, ಮಡಿಕೇರಿ ತಾ

ವಶಪಡಿಸಿಕೊಂಡ ಸ್ವತ್ತುಗಳ ವಿವರ:

1) ನಗದು ರೂ. 1,43,500/-

2) 04 ವಾಹನ

3) 02 ಎತ್ತುಗಳು

ಸದರಿ ಆರೋಪಿಗಳು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಎತ್ತುಗಳು ಹಾಗೂ ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ KA-51-B-6490 ಮಹಿಂದ್ರ ಬೊಲೇರೊ ವಾಹನವನ್ನು ಕಳವು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!