ಕುಶಾಲನಗರ, ಅ 10:ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಪಂ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕುಶಾಲನಗರ ಜ್ಞಾನಭಾರತಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ 2026-27 ಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ಕುಶಾಲನಗರ ಪಿಎಂ ಶ್ರೀ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿಗೆ ಮಡಿಕೇರಿ ಕ್ಷೇತ್ರ ಡಾ. ಮಂತರ್ ಗೌಡ ಚಾಲನೆ ನೀಡಿ ಶುಭ ಕೋರಿದರು. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ. ಗ್ರಾಮೀಣ ಕ್ರೀಡೆಗಳತ್ತ ಕೂಡ ವಿದ್ಯಾರ್ಥಿಗಳು ಆಸಕ್ತಿ ಹೊಂದಬೇಕಿದೆ.
ಕ್ರಿಕೆಟ್ ನಂತೆ ಕಬಡ್ಡಿ ಕೂಡ ಇಂದು ಜನಪ್ರಿಯತೆ ಕಂಡುಕೊಂಡಿದೆ. ಕಬ್ಬಡಿ ಆಟಗಾರರು ಜೀವನ ರೂಪಿಸಿಕೊಳ್ಳುವ ಅವಕಾಶವೂ ಹೆಚ್ಚಿದೆ. ಆದ್ದರಿಂದ ಅವಕಾಶ ದೊರತೆ ಕ್ರೀಡಾಪಟುಗಳು ತಮ್ಮ ತಂಡ ಮತ್ತು ಜಿಲ್ಲೆಗೆ ಕೀರ್ತಿ ತರಲು ಪರಿಶ್ರಮದ ಮೂಲಕ ಗೆಲುವು ಸಾಧಿಸಲು ಅವರು ಕರೆ ನೀಡಿದರು.
ಕುಶಾಲನಗರ ಮಾರುತಿ ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ಎಲ್.ನಾಗರಾಜ್ ಮತ್ತು ಡಿಡಿಪಿಐ ಆರ್.ಪಿ.ಮಹೇಶ್ ಮಾತನಾಡಿದರು.
ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ಎಂ.ಸಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್ ಹೆಚ್.ಜಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ರತ್ನಕುಮಾರ್ ಕೆ.ಆರ್, ಜಿಲ್ಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಸುಜಾತ, ಸರಕಾರಿ ಪ್ರಾಥಮಿಕ ಶಾಲಾ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣೇಶ್ ಬಿ.ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಹೆಚ್.ಎನ್, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎಂ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀನಿವಾಸ್ ಹೆಚ್.ಟಿ, ವಿರಾಜಪೇಟೆ ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಮೇಶ್, ಸೂಫಿ ಪೆರಾಜೆ, ಬಾಲಚಂದ್ರ ಕೆ.ಎಂ, ಜ್ಞಾನ ಭಾರತಿ ಪ್ರೌಢಶಾಲಾ ದೈಹಿಕ ಶಿಕ್ಷಕ ಉತ್ತಪ್ಪ ಮತ್ತಿತರರು ಇದ್ದರು.
ಮೈಸೂರು ವಿಭಾಗದ ಎಂಟು ಜಿಲ್ಲೆಗಳಿಂದ ಬಾಲಕ ಬಾಲಕಿಯರ ಒಟ್ಟು 16 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.
Back to top button
error: Content is protected !!