ಅವ್ಯವಸ್ಥೆ

ಹದಗೆಟ್ಟ ಗೊಂದಿಬಸವನಹಳ್ಳಿ ರಸ್ತೆ ವ್ಯವಸ್ಥೆ: ಕೆಸರು ಗುಂಡಿಯಲ್ಲಿ ಸಂಚರಿಸುವ ದೌರ್ಭಾಗ್ಯ.

ಕುಶಾಲನಗರ, ಜು 23: ಮುಳ್ಳುಸೋಗೆ ಗ್ರಾಪಂ‌ ವ್ಯಾಪ್ತಿಯ ಗೊಂದಿಬಸವನಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ ವ್ಯವಸ್ಥೆ ಹದಗೆಟ್ಟಿದೆ. ಹಲವು ಬಡಾವಣೆಗಳಿಗೆ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ನಾಗರಿಕರು ತೀವ್ರ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಗೊಂದಿಬಸವನಹಳ್ಳಿ ಗ್ರಾಮದ ರಾಮ್ಕೋ ಸಿಮೆಂಟ್ ಗೋದಾಮು ಬಳಿಯಿರುವ ವಾಟರ್ ಟ್ಯಾಂಕ್ ಹತ್ತಿರದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.‌ ಮೇಲ್ಭಾಗದಿಂದ ಹರಿದು ಬರುವ ನೀರು ಈ ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿ ಇಲ್ಲದ ಕಾರಣ ನೀರು ನಿಂತು ರಸ್ತೆ ಸಂಪೂರ್ಣ ಕೆಸರುಮಯವಾಗಿ ಕಾಲ್ನಡಿಗೆಯಲ್ಲಿ ಸಂಚರಿಸಲು ಕೂಡ ಸಾಧ್ಯವಾಗದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಈ ಮಾರ್ಗವನ್ನು ಅವಲಂಬಿಸಿರುವ 30 ಕ್ಕೂ ಅಧಿಕ‌ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಇದೇ ಸಮಸ್ಯೆಯಲ್ಲಿ‌ ಸಿಲುಕಿದ್ದಾರೆ.‌ ಕೂಡಲೆ ರಸ್ತೆ ವ್ಯವಸ್ಥೆ ಸರಿಪಡಿಸಲು ಕೋರಿ ಗ್ರಾಮಸ್ಥರು ಗ್ರಾಪಂ ಗೆ ಮನವಿ ಸಲ್ಲಿಸಿದರು.
ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳವುದಾಗಿ ಪಿಡಿಒ ಸುಮೇಶ್ ಭರವಸೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!