ಕ್ರೈಂ

ಮನೆಗೆ‌ ಕನ್ನ ಹಾಕಿ ಚಿನ್ನಾಭರಣ ಕಳವು: ಆರೋಪಿ ಬಂಧನ

ಕುಶಾಲನಗರ, ಜ 03:ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಟಿ ವೃತ್ತದ ಬಳಿಯ ನಿವಾಸಿ ರಜಿನಿ ಹರೀಶ್ ಎಂಬವವರು ದಿನಾಂಕ: 05-12-2024 ರಂದು ಮಗಳ ಶಾಲೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಲು ತೆರಳಿದ್ದು, ರಾತ್ರಿ ಮನೆಗೆ ಬಂದು ನೋಡಿದಾಗ ಮನೆಯ ಬೀರುನಲ್ಲಿದ್ದ ಅಂದಾಜು 87 ಗ್ರಾಂ ಚಿನ್ನಾಭರಣಗಳನ್ನು ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿ/ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆಹಾಕಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳ ಪತ್ತೆಯ ಸಲುವಾಗಿ ಮಹೇಶ್‌ ಕುಮಾರ್, ಡಿಎಸ್‌ ಪಿ, ಮಡಿಕೇರಿ ಉಪವಿಭಾಗ, ರಾಜು.ಪಿ.ಕೆ, ಸಿಪಿಐ, ಮಡಿಕೇರಿ ನಗರ ವೃತ್ತ, ಲೋಕೇಶ, ಪಿಎಸ್‌ಐ ಮತ್ತು ರಾಧ, ಪಿಎಸ್‌ಐ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾ।, ಕೊಳಗಿ ಗ್ರಾಮ ನಿವಾಸಿಯಾದ ನಾಗರಾಜು, (37 ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಹಾಗೂ ಆರೋಪಿಯಿಂದ ನಗದು ರೂ. 50,000/-ಗಳನ್ನು, 87 ಗ್ರಾಂ ಚಿನ್ನಾಭರಣಗಳು & 2 ಬೆಳ್ಳಿ ಚೈನ್ ವಶಪಡಿಸಿಕೊಳ್ಳಲಾಗಿರುತ್ತದೆ.

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 10-05-2024 ರಂದು ಶಾಂತಿನಿಕೇತನದಲ್ಲಿರುವ ವೆಲೆರಿಯನ್ ಲೋಬೋ ಎಂಬುವವರಿಗೆ ಸೇರಿದ ದಿನಸಿ ಅಂಗಡಿಯಿಂದ ಅಂದಾಜು ನಗದು ರೂ 1,10,000 ಹಾಗೂ 28-07-2024 ಚಾಮುಂಡೇಶ್ವರಿ ನಗರದ ನಿವಾಸಿಯಾದ ರಾಜಮ್ಮ ಮಹದೇವರವರ ಮನೆಯಲ್ಲಿ ಅಂದಾಜು 12 ಗ್ರಾಂ ತೂಕದ ಚಿನ್ನಾಧಾರಣ & 03 ಜೊತೆ ಬೆಳ್ಳಿ ಜೈನ್ & ರೂ. 10,000/- ಗಳನ್ನು ಕಳವು ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!