ಕುಶಾಲನಗರ, ಆ 22: ನಮ್ಮ ದೈಹಿಕ ಮಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ವಾಲ್ನೂರು-ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಸಂತ ಕುಮಾರ್. ಬಿ.ಎನ್. ಹೇಳಿದರು.
ಕುಶಾಲನಗರ ಸಮೀಪದ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ ಕುಶಾಲನಗರ ವಲಯಗಳ ಪ್ರಾಥಮಿಕ ಶಾಲಾ ವಿಭಾಗದ 25-26ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ವಲಯ ಮಟ್ಟದ ಕ್ರೀಡಾಕೂಟ ಒಂದು ಪ್ರಯತ್ನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಇದನ್ನು ಹೆಕ್ಕಿ ತೆಗೆಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸಿಕ್ಕ ಅವಕಾಶದಲ್ಲಿ ಪ್ರತಿಭೆಯನ್ನು ಪ್ರತಿಬಿಂಬಿಸಲು ವಿದ್ಯಾರ್ಥಿಗಳು ತಯಾರಿರಬೇಕೆಂದು ಸೂಚಿಸಿದರು. ಮಕ್ಕಳಿಗೆ ಪಾಠದ ಜೊತೆ ಕ್ರೀಡೆ ಮುಖ್ಯ, ಸಕರಾತ್ಮಕ ಭಾವನೆಗಳನ್ನು ಬೆಳೆಸಲು ಮನಸ್ಸನ್ನು ಸದೃಢವಾಗಿಸಲು ಕ್ರೀಡೆಯು ಸಹಕಾರಿಯಾಗಿದೆ ಎಂದರು.
ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಮನು ಮಹೇಶ್ ಮಾತನಾಡಿ, ಕ್ರೀಡೆಗಳು ಕೇವಲ ಆಟವಲ್ಲ ,ಇದು ಒಗ್ಗಟ್ಟಿನಿಂದ ಆಡುವ ಒಂದು ಆರೋಗ್ಯಕರ ಸ್ಪರ್ಧೆಯಾಗಿದೆ. ಈ ಸ್ಪರ್ಧೆಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಕಾರಿಯಾಗಿದೆ ಎಂದರು
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಅಪ್ಸತ್, ಅಭಿವೃದ್ದಿ ಅಧಿಕಾರಿ ಮೇದಪ್ಪ, ಸಹ ಶಿಕ್ಷಕರಾದ ಮುಬೀನಾ, ಚೇತನ್ ಕುಮಾರ್,ಪ್ರಿಯಾ, ಜೈಸಿ ಜೋಸೆಫ್, ಸರೋಜ, ಪುಷ್ಪಾವತಿ, ಗಂಗಮ್ಮ,ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್, ಜಾನ್ಸನ್, ಸುರೇಶ್, ಪ್ರವೀಣ್ ಪಾಟೀಲ್, ಭಾರತೀ, ಡೀನಾ, ಕುಸುಮಾ, ಸೋಮಶೇಖರ್, ಮತ್ತಿತರರು ಹಾಜರಿದ್ದರು.
Back to top button
error: Content is protected !!