ಕೂಡಿಗೆ, ನ. 13: ಕೂಡುಮಂಗಳೂರು ಮಂತರ್ ಗೌಡ ಅಭಿಮಾನಿ ಬಳಗದ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ರವರ 41. ನೇ ಹುಟ್ಟು ಹಬ್ಬದ ಆಚರಣೆಯನ್ನು ಕೂಡುಮಂಗಳೂರು ಅಭಿಮಾನಿ ಬಳಗದವರು ಕೂಡಿಗೆಯ ಶ್ರೀ ಶಕ್ತಿ ವೃಧ್ದಾಶ್ರಮದಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಹಬ್ಬದ ಕೇಕ್ ಕಟ್ಟು ಮಾಡಿದ ನಂತರ ಆಶ್ರಮದಲ್ಲಿರುವ ವಯೋವೃದ್ಧರಿಗೆ ಊಟೋಪಾಚಾರ ನೀಡುವ ಮೂಲಕ ಶಾಸಕ ಡಾ. ಮಂತರ್ ಗೌಡ ರವರು ಆಚರಣೆ ನೆರವೇರಿಸಿಕೊಂಡರು.
ಈ ಸಂದರ್ಭದಲ್ಲಿ ಕೂಡುಮಂಗಳೂರು ಮಂತರ್ ಗೌಡ ಅಭಿಮಾನಿ ಬಳಗದ ಪ್ರಮುಖರಾದ ಎಂ. ನಾಗರಾಜ್, ಮಧು ಚಂದ್ರ, ಕಾಂತಾರಾಜ್, ಪುನೀತ್ ಕುಮಾರ್, ಮಧು, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅನಂತ, ಅರುಣ್ ರಾವ್, ಕೂಡ್ಲೂರು ಈರಪ್ಪ, ಗಿರೀಗೌಡ, ಲೋಕೇಶ್, ಧರ್ಮ, ಅಣ್ಣಚಿ, ಹರೀಶ್, ಶ್ರೀ ಶಕ್ತಿ ವೃಧ್ದಾಶ್ರಮ ಮೇಲ್ವಿಚಾರಕ ಬಿ.ಎಸ್. ಚಂದ್ರು ,ಸೇರಿದಂತೆ ಬಳಗ ಸ್ನೇಹಿತರು ಹಾಜರಿದ್ದರು.
Back to top button
error: Content is protected !!