ಧಾರ್ಮಿಕ

ವಾಲ್ನೂರು ತ್ಯಾಗತ್ತೂರಿನಲ್ಲಿ‌ ನಡೆದ ಹಿಂದೂ ಸಂಗಮ ಕಾರ್ಯಕ್ರಮ

ಕುಶಾಲನಗರ, ಜ 31: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ವಾಲ್ನೂರು ತ್ಯಾಗತ್ತೂರು ಮಂಡಲದ ಆಶ್ರಯದಲ್ಲಿ ಭಾನುವಾರ ಹಿಂದೂ ಸಂಗಮ ಶೋಭಾಯಾತ್ರೆ ನಡೆಯಿತು. ಪ್ರಗತಿಪರ ಕೃಷಿ ಎಂ ಎಂ ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ‌ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಜೇಶ್‌ನಾಥ್ ಗುರೂಜಿ ಆಶೀರ್ವಚನ ನೀಡಿದರು.

ರಾ.ಸ್ವ.ಸೇ ಸಂಘದ ಮಂಗಳೂರು ವಿಭಾಗ ಪ್ರಚಾರಕ ಸುರೇಶ್ ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯ ಅತಿಥಿಗಳು ಎಂ ಬಿ ದೇವಯ್ಯ, ತಕ್ಕರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ನೂರು.ಲ,
ಜಿ.ಎನ್ ರಾಮಪ್ಪ, ಮುಖ್ಯಸ್ಥರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ನೂರು ಭಾಗಿಯಾಗಿದ್ದರು.
ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!