ಕುಶಾಲನಗರ, ಜು 03: ಶಿರಂಗಾಲದಿಂದ ಕೂಡ್ಲೂರು ಕೈಗಾರಿಕಾ ಬಡಾವಣೆಗೆ ಮದ್ಯದಂಗಡಿ ಸ್ಥಳಾಂತರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ನಿಯಮಬಾಹಿರವಾಗಿ ಮದ್ಯದಂಗಡಿ ಸ್ಥಳಾಂತರ ಮಾಡುತ್ತಿರುವ ಬಗ್ಗೆ ಆರೋಪ ವ್ಯಕ್ತಪಡಿಸಿರುವ ಸ್ಥಳೀಯ ಮಹಿಳೆಯರು ಮದ್ಯದಂಗಡಿ ಆರಂಭಿಸಲು ಆಕ್ಷೇಪ ವ್ಯಕ್ತಪಡಿಸಿದರು.
ಹೆದ್ದಾರಿ ಯಿಂದ ನಿಗದಿತ 220 ಮೀ ಅಂತರದಲ್ಲಿ ಮದ್ಯದಂಗಡಿ ಸ್ಥಾಪಿಸಬೇಕು. ಆದರೆ ಇಲ್ಲಿ 193 ಮೀ ದೂರಕ್ಕೆ ಮದ್ಯದಂಗಡಿ ತೆರೆಯಲಾಗಿದೆ. ಹಲವು ಕಾಫಿ ಘಟಕಗಳನ್ನು ಒಳಗೊಂಡಿರುವ ಪ್ರದೇಶದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಮಾರ್ಗದಲ್ಲಿ ಮದ್ಯದಂಗಡಿ ತೆರೆಯುವುದು ಅನನುಕೂಲ ಹಾಗೂ ಆತಂಕದ ಸಂಗತಿ ಎಂದು ಸ್ಥಳೀಯರಾದ ನಾಗರಾಜು, ರವಿ, ಮಹೇಶ್, ಪಾರ್ವತಮ್ಮ ಎಂಬವರು ದೂರಿದ್ದಾರೆ. ಕೂಡಲೆ ಸಂಬಂಧಿಸಿದ ಇಲಾಖೆ, ಗ್ರಾಪಂ ಈ ಬಗ್ಗೆ ಪರಿಶೀಲನೆ ನಡೆಸಿ ಮದ್ಯದಂಗಡಿ ತೆರವುಗೊಳಿಸುವಂತೆ ಆಗ್ರಹಿಸಿದರು.
Back to top button
error: Content is protected !!