ಕುಶಾಲನಗರ ಅ. 30: ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ತುರ್ತು ಸಭೆ ಅಧ್ಯಕ್ಷ ಕೆ.ಟಿ .ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ತುರ್ತು ಸಭೆಯಲ್ಲಿ ಹಳೆ ಕೂಡಿಗೆಯಲ್ಲಿ ಹೊಸದಾಗಿ ಮದ್ಯದ ಅಂಗಡಿಯನ್ನು ತೆರೆಯಲು ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಜಾಗದ ನಿರಾಕ್ಷಪಣಾ ಪತ್ರವನ್ನು (ಎನ್.ಓ.ಸಿ) ಅಭಿವೃದ್ಧಿ ಅಧಿಕಾರಿ ಮನಬಂದಂತೆ ನೀಡಿರುವ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಕಳೆದ ತಿಂಗಳ ಮಾಸಿಕ ಸಭೆಗೆ ಮದ್ಯದ ಅಂಗಡಿ ತೆರೆಯಲು ಎನ್.ಓ.ಸಿ.ಗೆ ಅರ್ಜಿದಾರ ಅರ್ಜಿಯನ್ನು ಸಲ್ಲಿಸಿದ್ದರು.
ಕಳೆದ ಮಾಸಿಕ ಸಭೆಯಲ್ಲಿ ಹಾಜರಿದ್ದ ಸದಸ್ಯರು, ಸ್ಥಳ ಪರಿಶೀಲನೆ ನಡೆಸಿ ಸಮರ್ಪಕವಾದ ವರದಿಯ ಆಧಾರದ ಮೇಲೆ ಮುಂದಿನ ಸಭೆಯಲ್ಲಿ ಚರ್ಚಿಸಿ ನಂತರ ಕ್ರಮ ಕೈಗೊಳ್ಳವ ಬಗ್ಗೆ ನಿರ್ಣಯ ಮಾಡಿದ್ದರು.
ಆದರೂ ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಅಭಿವೃದ್ಧಿ ಅಧಿಕಾರಿ ಜಾಗದ ಎನ್. ಓ.ಸಿ.ಅನ್ನು ನೀಡಿರುವ ಬಗ್ಗೆ ತುರ್ತು ಸಭೆಯಲ್ಲಿ ಸದಸ್ಯರಾದ ಹೆಚ್.ಎಸ್. ರವಿ, ಅರುಣ್ ರಾವ್, ಅನಂತ್, ಟಿ.ಪಿ. ಹಮೀದ್, ಮೋಹಿನಿ, ಮಂಗಳ, ವಾಣಿ , ಜಯಶೀಲಾ ಆಕ್ರೋಶ ವ್ಯಕ್ತಪಡಿಸಿ ಎನ್.ಒ.ಸಿ ರದ್ದುಗೊಳಿಸುವಂತೆ ಸಭೆಯಲ್ಲಿ ಒತ್ತಾಯ ಮಾಡಿದರು.
ಸಭೆಯಲ್ಲಿ ಮದ್ಯದ ಅಂಗಡಿ ತೆರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದು ನಂತರ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಗಮನಕ್ಕೆ ತಂದು, ಮುಂದಿನ ತಿಂಗಳಲ್ಲಿ ನಡೆಯುವ ಮಾಸಿಕ ಸಭೆಗೆ ಎನ್.ಓ.ಸಿ.ಅನ್ನು ರದ್ದು ಪಡಿಸಲು ಕ್ರಮವನ್ನು ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಸದಸ್ಯರ ಒತ್ತಾಯಿಸಿದರು. ಮಾಸಿಕ ಸಭೆಗೆ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಹಾಜರಾಗುವಂತೆ ಮನವಿ ಮಾಡುವಂತೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.
ಹುದುಗೂರು ಗ್ರಾಮದ ಸದಸ್ಯ ಹೆಚ್. ಎಸ್. ರವಿ ಮಾತನಾಡಿ, ಕಳೆದ ಮಾಸಿಕ ಸಭೆಯಲ್ಲಿ ನಾನು ಮದ್ಯದ ಅಂಗಡಿ ತೆರೆಯುವ ವಿಚಾರವಾಗಿ ವಿಷಯ ಮಂಡನೆ ಮಾಡಿದರೂ ಸಹ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ, ಕಾರ್ಯದರ್ಶಿ, ಚರ್ಚೆಗಳನ್ನು ನೊಂದಣಿ ಪುಸ್ತಕದಲ್ಲಿ ನೊಂದಣಿ ಮಾಡದ ಕಾರಣ ತನ್ನ ಹಕ್ಕಿಗೆ ಚುತಿ ತಂದಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಭೆಗೆ ಅರ್ಜಿಯನ್ನು ನೀಡಿ, ಇಲಾಖೆಯ ತನಿಖೆಗೆ ಅಗ್ರಹ ಪಡಿಸಿದರು.
Back to top button
error: Content is protected !!