ಆತ್ಮಹತ್ಯೆ

ಮೊಬೈಲ್ ಶಾಪ್ ಒಳಗೆ ನೇಣಿಗೆ ಶರಣಾದ ಮಾಲೀಕ

ಕುಶಾಲನಗರ, ಅ 28: ಕುಶಾಲನಗರದ ಕೋಣಮಾರಿಯಮ್ಮ ದೇವಾಲಯ ಮುಂಭಾಗ ಮೊಬೈಲ್ ಶಾಪ್ ನಡೆಸುತ್ತಿದ್ದ ವಿನೋದ್ (37) ಎಂಬಾತ ಮಳಿಗೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ಮಾಹಿತಿ ‌ನೀಡಿದ್ದಾರೆ.

ಕುಶಾಲನಗರ ಎಸ್.ಎನ್.ಡಿ.ಪಿ.ಸದಸ್ಯನಾಗಿದ್ದ ವಿನೋದ್ ಹಲವು ‌ಕಾಲ ಬಾಡಿಗೆ ಕಟ್ಟಡದಲ್ಲಿ ಮೊಬೈಲ್ ಸರ್ವೀಸ್ ಸೆಂಟರ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ರಾತ್ರಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದ್ದು ಸ್ಥಳೀಯರು ಇಂದು ಮಧ್ಯಾಹ್ನ ಕಿಟಕಿಯಿಂದ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕುಶಾಲನಗರ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!