ಕುಶಾಲನಗರ, ಅ 20:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರುಪಾಕ್ಷಪುರದ ಶ್ರೀ ವಿನಾಯಕ ಯುವಕ ಸಂಘದ ಆಶ್ರಯದಲ್ಲಿ ವಿಶನ್ ಸ್ಪ್ರಿಂಗ್ ಸಂಸ್ಥೆ ವತಿಯಿಂದ ಗ್ರಾಮಸ್ಥರಿಗೆ ಕಣ್ಣಿನ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿತ್ತು.
ಗ್ರಾಮದ 50 ಕ್ಕೂ ಅಧಿಕ ಮಂದಿ ಕಣ್ಣಿನ ತಪಾಸಣೆಗೆ ಒಳಗಾಗಿ ರಿಯಾಯಿತಿ ದರದಲ್ಲಿ ಕನ್ನಡಕ ಪಡೆದುಕೊಂಡರು.
ಕಾರ್ಯಕ್ರಮ ದಲ್ಲಿ ನಂಜರಾಯಪಟ್ಟಣ
ಗ್ರಾಮ ಪಂಚಾಯಿತಿ ಸದಸ್ಯ ರಕ್ಷಿತ್ ಮಾವಾಜಿ, ವಿನಾಯಕ ಯುವಕ ಸಂಘದ ಅಧ್ಯಕ್ಷ ಮನೋಜ್, ಉಪಾಧ್ಯಕ್ಷ ಅಜಯ್ ಮಾವಾಜಿ, ಕಾರ್ಯದರ್ಶಿ ಸಂದೀಪ್, ಖಜಾಂಚಿಗಳಾದ ವಿಜೇಶ್, ಮಣಿಕಂಠ, ಪ್ರವೀಣ್, ಪದಾಧಿಕಾರಿಗಳಾದ ಬೇಲೂರ ನಿತನ್, ಯೋಗೇಶ್, ಗ್ರಾಮದ ಹಿರಿಯರಾದ ಬಾಲಕೃಷ್ಣ, ವಿಜಯ, ಮೊಹಮ್ಮದ್, ಸಣ್ಣಸ್ವಾಮಿ, ಲಕ್ಷ್ಮಿ, ಸುರೇಂದ್ರ ನಾಯರ್, ಡಾಲು ತುಂತೋಜಿ ಇದ್ದರು.
Back to top button
error: Content is protected !!