ಕುಶಾಲನಗರ, ಸೆ 23:ಕುಶಾಲನಗರ ಪುರಸಭೆ ಆಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯಾಧಿಕಾರಿ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಡಿ ಕಾಯುವ ಸೈನಿಕರಂತೆ ಪಟ್ಟಣದ ಶುಚಿತ್ವ ಕಾಪಾಡಲು ರೋಗರುಜಿನಗಳ ವಿರುದ್ದ ಸದಾ ಹೋರಾಟ ಮಾಡುವ ಪೌರ ಕಾರ್ಮಿಕರ ಸೇವೆ ಅನನ್ಯವಾದುದು. ಸಿಬ್ಬಂದಿಗಳ ಸಂಖ್ಯೆ ಕಡಿಮೆಯಿದ್ದರೂ ಕೂಡ ಇರುವಷ್ಟು ಮಂದಿ ಪ್ರಾಮಾಣಿಕವಾದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಪೌರಕಾರ್ಮಿಕರ ಆರೋಗ್ಯ ಸುರಕ್ಷತೆ ಸೇರಿದಂತೆ ಕಛೇರಿ ವತಿಯಿಂದ ದೊರಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಭರವಸೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್ ಮಾತನಾಡಿ, ಕೊರೋನ ಸಂದರ್ಭ ಎಲ್ಲರೂ ಮನೆಯೊಳಗಿದ್ದ ವೇಳೆ ಪೌರ ಕಾರ್ಮಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ನಮ್ಮ ಸುರಕ್ಷತೆಗಾಗಿ ಹೋರಾಡಿದ್ದಾರೆ. ಪೌರಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಚ್ಚತೆ ಕಾಪಾಡುವಲ್ಲಿ ಪೌರಕಾರ್ಮಿಕರೊಂದಿಗೆ ಸಾರ್ವಜನಿಕರು ಕೂಡ ತಮ್ಮ ಜವಬ್ದಾರಿ ತೋರಬೇಕಿದೆ. ಪೌರ ಕಾರ್ಮಿಕರು ತಮ್ಮ ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕಿದೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ.ಜೈವರ್ಧನ್ ಮಾತನಾಡಿ, ಅರ್ಹ ಫಲಾನುಭವಿ ಪೌರಕಾರ್ಮಿಕರಿಗೆ ನಿವೇಶನ ಒದಗಿಸುವ ಕಾರ್ಯ ಆಗಬೇಕಿದೆ. ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಸ್ವಚ್ಚತಾ ಸೈನಿಕರಿಗೆ ದೊರಬೇಕಾದ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕಿದೆ ಎಂದರು.
ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ, , ಸದಸ್ಯರಾದ ಪ್ರಮೋದ್ ಮುತ್ತಪ್ಪ, ಜೈವರ್ಧನ್, ವಿ.ಎಸ್.ಆನಂದಕುಮಾರ್, ಎಂ.ಕೆ.ದಿನೇಶ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಸುರಯ್ಯಭಾನು, ಶಿವಶಂಕರ್, ವಿ.ಜೆ. ನವೀನ್, ಎಂ.ಎಂ.ಪ್ರಕಾಶ್, ಬಿ.ಎಲ್.ಜಗದೀಶ್, ಪದ್ಮಾ, ಮುಖ್ಯಾಧಿಕಾರಿ ಗಿರೀಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಪೌರ ಸೇವಾ ಸಂಘದ ಪ್ರಮುಖರಾದ ರಶ್ಮಿ, ಮೋಹನ್, ಗಣೇಶ್, ನಂಜುಂಡ, ಇದ್ದರು.
ಕಾರ್ಯಕ್ರಮದಲ್ಲಿ
ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಏರ್ಪಡಿಸಲಾಗಿತ್ತು.
Back to top button
error: Content is protected !!