ಕುಶಾಲನಗರ ಅ 11:ಸಂಸದ ಪ್ರತಾಪ್ ಸಿಂಹ ಮಹಿಷಾ ದಸರಾ ಆಚರಣೆಯನ್ನು ವಿರೋಧಿಸುವುದರ ಮೂಲಕ ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಹಾಗೂ ಆರ್.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಕೆ.ಬಿ.ರಾಜು ಆರೋಪಿಸಿದರು.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ಹಿಂದಿನಿಂದಲೂ ಮಹಿಷಾ ದಸರಾವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು. ಮಹಿಷಾ ಡ್ರಾವಿಡರ ಪೂರ್ವಜ ಮೈಸೂರನ್ನು ಆಳಿದ ಅರಸ ಇಂತಹ ಮಹಾನ್ ವ್ಯಕ್ತಿಯನ್ನು ಸಂಸದರು ದೆವ್ವ ಮತ್ತು ರಾಕ್ಷಸನಿಗೆ ಹೋಲಿಸಿರುವುದು ಖಂಡನೀಯ. ಮಹಿಷಾ ನನ್ನು ವಿರೋಧಿಸಲು ಸಂಸದ ಪ್ರತಾಪ ಸಿಂಹನಿಗೆ ಏನಾದರು ಮಹಿಷಾ ತೊಂದರೆ ಕೊಟ್ಟದ್ದಾರೆಯೆ. ಅಥವಾ ಅವರ ಪೂರ್ವಜರಿಗೆ ಏನಾದರು ವ್ಯಾಜ್ಯ ಇತ್ತೆ ಅದನ್ನಾದರೂ ತಿಳಿಸಲಿ. ನಮ್ಮ ಪೂರ್ವಜನಾಗಿರುವ ಮಹಿಷಾ ದಸರಾ ಆಚರಿಸುವುದರಲ್ಲಿ ತಪ್ಪೇನಿದೆ. ಸಂಸದರು ಪ್ರಚಾರಕ್ಕಾಗಿ ಬಿಜೆಪಿಯಲ್ಲಿ ಖಾಲಿ ಇರುವ ರಾಜ್ಯಾಧ್ಯಕ್ಷ ಹುದ್ದೆಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿದೆ ಚಾಮುಂಡಿ ಮಹಿಷಾನನ್ನು ಸಂಹರಿಸಿಲ್ಲ ಎಂಬುದಕ್ಕೆ ಕಾಲಘಟ್ಟಗಳೆ ಸಾಕ್ಷಿ ಹೇಳುತ್ತಿವೆ. ಸಮಾಜದಲ್ಲಿ ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಶಾಂತಿ ಕದಡುತ್ತಿರುವ ಸಂಸದ ಪ್ರತಾಪ ಸಿಂಹನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ನಾವೂ ಕೂಡ ಮಹಿಷಾ ದಸರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಆರ್.ಪಿ.ಐ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಡಿ.ಲತಾ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷೆ ವೀಣಾ ಹಾಜರಿದ್ದರು.
Back to top button
error: Content is protected !!