ಕುಶಾಲನಗರ, ಸೆ. 22: ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹೆಚ್. ಟಿ. ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನಿವ್ವಳ ಲಾಭದ ವಿಲೇವಾರಿಯ ಬಗ್ಗೆ, ಮುಂಬರುವ ವರ್ಷಕ್ಕಾಗಿ ಸಮಿತಿಯು ತಯಾರಿಸಿದ ಸಂಘದ ಚಟುವಟಿಕೆಗಳು, ಕಾರ್ಯಕ್ರಮ ಅನುಮೋದನೆ ಬಗ್ಗೆ ಚರ್ಚೆಗಳು ಸೇರಿದಂತೆ ಸಂಘದ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ಹಾಜರಿದ್ದ ಸಂಘದ ಸದಸ್ಯರುಗಳಿಂದ ನಡೆದವು.
ಅಧ್ಯಕ್ಷತೆ ವಹಿಸಿದ್ದ ಹೆಚ್.ಟಿ.ಮೋಹನ್ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯ ಸಹಕಾರ ಬಹು ಮುಖ್ಯ. ಅದರ ಜೊತೆಯಲ್ಲಿ ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ರೈತರ ಪ್ರಗತಿ ಪೂರಕವಾದ ಹೊಸ ಹೊಸ ಯೋಜನೆಯನ್ನು ರೂಪಿಸುವ ಮೂಲಕ ಸಂಘದ ಉನ್ನತಿಕರಣಕ್ಕೆ ಆಡಳಿತ ಮಂಡಳಿಯು ಪ್ರಯತ್ನ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಸರೋಜಮ್ಮ, ನಿರ್ದೇಶಕರಾದ ಹೆಚ್.ಎಸ್ ಅಂಬಿಕಾ, ಹೆಚ್.ಎಸ್. ಕೇಶವ, ಹೆಚ್.ಟಿ. ನಾರಾಯಣ, ಹೆಚ್.ಆರ್. ಪ್ರದೀಪ್ ಕುಮಾರ್, ಹೆಚ್.ಎನ್. ಮಹದೇವ, ಎಂ.ಎಂ.ಮಹದೇವ, ಹೆಚ್. ಆರ್. ಮಣಿಕಂಠ, ಹೆಚ್.ಜೆ.ರವಿ, ಹೆಚ್.ಜೆ. ಶರತ್ ಕುಮಾರ್, ಹೆಚ್.ವಿ. ಸೋಮಶೇಖರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಮೇಲ್ವಿಚಾರಕಿ ಎಂ.ಕೆ.ಗೀತಾ, ಹೆಬ್ಬಾಲೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಮೇನೇಜರ್ ತುಂಗರಾಜ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಎನ್.ಗಿರೀಶ್, ಸೇರಿದಂತೆ ಸಂಘದ ರೈತ ಸದಸ್ಯರು ಹಾಜರಿದ್ದರು .
ಸಂಘದ ಸದಸ್ಯರುಗಳ ಮಕ್ಕಳು ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಹೆಚ್.ಎನ್. ಗಿರೀಶ್ ಸ್ವಾಗತಿಸಿ, ಸೋಮಶೇಖರ್ ವಂದಿಸಿದರು.
Back to top button
error: Content is protected !!