ಕಾರ್ಯಕ್ರಮ

ಕುಶಾಲನಗರದ ವಿವೇಕಾನಂದ ಪಿಯು ಕಾಲೇಜು ವಾರ್ಷಿಕೋತ್ಸವ ಸಮಾರಂಭ ವಿವೇಕೋತ್ಸವ-2025

ಕುಶಾಲನಗರ, ನ 29: (ಕುಶಲವಾಣಿ) ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ವಿವೇಕೋತ್ಸವ-2025 ಕಾಲೇಜು ಆವರಣದಲ್ಲಿ ನಡೆಯಿತು.

ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚಿಂತಕ, ಅಂಕಣಕಾರ ಹಾಗೂ ವಾಗ್ಮಿಗಳಾದ ಡಾ.ಕೆ.ಪಿ.ಪುತುರಾಯ, ಪ್ರೇರಕ ಭಾಷಣಕಾರ ಡಾ.ಪಾಂಡುರಂಗ ಹೆಚ್.ಆರ್, ವಿವೇಕಾನಂದ ಎಜ್ಯುಕೇಶನಲ್ ಟ್ರಸ್ಟ್ ಗೌರವ ಪ್ರಾಂಶುಪಾಲ ಎಂ.ನಾಗೇಶ್ ಪಾಲ್ಗೊಂಡಿದ್ದರು.
ವಿವೇಕಾನಂದ ಕಾಲೇಜು ಪ್ರಾಂಶುಪಾಲೆ‌ ಕ್ಲಾರಾ ರೇಷ್ಮಾ, ಮಹಾತ್ಮಗಾಂಧಿ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ.ಲಿಖಿತಾ, ಟ್ರಸ್ಟ್ ಖಜಾಂಚಿ ನಂಜಪ್ಪ, ಆಡಳಿತಾಧಿಕಾರಿ ಮಹೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!