ಕುಶಾಲನಗರ, ಸೆ 15: ಕುಶಾಲನಗರದ ಗೊಂದಿಬಸವನಹಳ್ಳಿಯಲ್ಲಿರುವ ಶ್ರೀ ಕಾಲಭೈರವೇಶ್ವರ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಸಾಯಿ ಹಾಸ್ಪಿಟಲ್ ಅನ್ನು ಶಾಸಕ ಡಾ.ಮಂತರ್ ಗೌಡ ಲೋಕಾರ್ಪಣೆಗೊಳಿಸಿದರು.
ಮೂರು ಅಂತಸ್ತಿನಲ್ಲಿ ಆರಂಭಗೊಂಡಿರುವ ಆಸ್ಪತ್ರೆಯ ವಾರ್ಡ್ ಗಳು, ಆಪರೇಷನ್ ಥಿಯೇಟರ್ ಗಳನ್ನು ಉದ್ಘಾಟಿಸಿ ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಗುಣಮಟ್ಟದ ಸೇವೆಯ ಮೂಲಕ ಆಸ್ಪತ್ರೆ ಮನೆಮಾತಾಗಬೇಕಿದೆ.
ಕೇವಲ ಆದಾಯಕ್ಕೆ ಮಾತ್ರ ಒತ್ತು ನೀಡದೆ
ಜನರೊಂದಿಗಿನ ಒಡನಾಟ, ಪ್ರಾಮಾಣಿಕ ಸೇವೆಯ ಮೂಲಕ ಇತರೆ ಆಸ್ಪತ್ರೆಗಳಿಗಿಂತ ಮಿಗಿಲಾಗಿ ಕಾರ್ಯ ನಿರ್ವವಹಿಸುವಂತಾದಾಗ ಯಶಸ್ಸು ಗಳಿಸಲು ಸಾಧ್ಯ ಎಂದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯ ದಿನೇಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ಆಸ್ಪತ್ರೆಯ ಪ್ರಮುಖರಾದ ಡಾ.ಗಯ ಕುಶಾಲ್, ಡಾ.ಇಮಾನಿ ಎಂ.ಕೆ, ಕಟ್ಟಡ ಮಾಲೀಕ ಜಗದೀಶ್, ಉದ್ಯಮಿ ಎಸ್ಎಲ್ಎನ್ ವಿಶ್ವನಾಥನ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಜಿಪಂ ಮಾಜಿ ಆದ್ಯಕ್ಷೆ ಕೆ.ಪಿ.ಚಂದ್ರಕಲಾ ಮತ್ತಿತರರು ಇದ್ದರು.
Back to top button
error: Content is protected !!