ಪ್ರಕಟಣೆ

ಕುಶಾಲನಗರದಲ್ಲಿ ‘ಪೋಷ್’ ಬಟ್ಟೆ ಮಳಿಗೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ

ಕುಶಾಲನಗರ, ಸೆ 08: ಕುಶಾಲನಗರದ ಬಿಎಂ ರಸ್ತೆಯ ಬೈಚನಹಳ್ಳಿಯಲ್ಲಿ ಆರಂಭಗೊಂಡಿರುವ ನೂತನ ಬಟ್ಟೆ ಮಳಿಗೆ ‘ಪೋಷ್’ ಅನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಯುವ ಸಮೂಹ ಸ್ವಂತ ಉದ್ಯಮದತ್ತ ಮುಖ‌ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಆರ್ಥಿಕವಾಗಿ ಸದೃಢರಾಗುವ ಮೂಲಕ ಇತರರಿಗೂ ಉದ್ಯೋಗವಕಾಶ ಕಲ್ಪಿಸಿದಂತಾಗುತ್ತದೆ. ಇಂತಹ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹ ಸಹಕಾರ ಅತ್ಯಗತ್ಯ ಎಂದರು.

ಅತಿಥಿಗಳಾಗಿ‌ ಪಾಲ್ಗೊಂಡಿದ್ದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರದಲ್ಲಿ ಆರಂಭಗೊಂಡಿರುವ ಹೊಸ ಮಳಿಗೆ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.

ಮಳಿಗೆ‌ ಮಾಲೀಕ ನಿಜಾಮ್ ಮಾತನಾಡಿ, ನೂತನ ಮಳಿಗೆಯಲ್ಲಿ ಆಧುನಿಕ ವಿನ್ಯಾಸದ ಬಟ್ಟೆಬರೆಗಳು ಲಭ್ಯವಿದ್ದು ಎಲ್ಲರೂ ಒಮ್ಮೆ‌ ಭೇಟಿ ನೀಡುವಂತೆ‌ ಕೋರಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!