ಪ್ರಕಟಣೆ

ಸುಣ್ಣದಕೆರೆ: ಸ್ಮಶಾನ ಜಾಗ ವಿವಾದ, ಹಳೆಯ ಆದೇಶ ರದ್ದು: ಪುನರ್ ಪರಿಶೀಲನೆಗೆ ನಿರ್ದೇಶನ

ಕುಶಾಲನಗರ, ಆ 09: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ನಿಗದಿಪಡಿಸಿದ್ದ ಜಾಗದ ವಿವಾದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿ ರಜಿತ್ ಅವರು ಮೇಲ್ಮನವಿ ನ್ಯಾಯಾಧಿಕರಣಕ್ಕೆ ಸಲ್ಲಿಸಿದ ಅರ್ಜಿ ಅನ್ವಯ ಹಳೆಯ ಆದೇಶ ಬದಿಗಿಟ್ಟು ಪುನರ್ ಪರಿಶೀಲನೆಗೆ ಆದೇಶ ಹೊರಬಿದ್ದಿದೆ.
ಸದರಿ ಸ್ಥಳದಲ್ಲಿ ದೇವರ ಗುಡಿಗಳಿದ್ದು, ಪರಿಶಿಷ್ಟರಿಗೆ ತೋಟಗಾರಿಕಾ ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಸ್ಮಶಾನಕ್ಕೆ ಅವಕಾಶ ಕಲ್ಪಿಸಬಾರದು ಎಂದು ಕೋರಿ‌ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ಅಧ್ಯಕ್ಷೆ ಮಂಜುಳಾ, ಜಿಲ್ಲಾ ನ್ಯಾಯಾಧೀಶರಾದ ಹನುಮಂತಪ್ಪ ಅವರು ಹಳೆಯ ಆದೇಶ ರದ್ದುಗೊಳಿಸಿ ಹೊಸದಾಗಿ ಪುನರ್ ಪರಿಶೀಲಿಸಿ ವರದಿ ನೀಡುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ ಎಂದು ಅರ್ಜಿದಾರರು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!