ಕುಶಾಲನಗರ, ಆ 03: ಹಾರಂಗಿ ಎಡದಂಡೆ ನಾಲೆಯ ದುರಸ್ಥಿ ಕಾಮಗಾರಿ ಇತ್ತೀಚೆಗೆ ಅಲ್ಲಲ್ಲಿ ಕುಸಿತ ಕಾಣುತ್ತಿದೆ.
ರೂ 50 ಕೋಟಿಗೂ ಅಧಿಕ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಬರೆ ಕುಸಿತ ಕಂಡು ಬರುತ್ತಿದೆ. ನಿರಂತರ ಮಳೆಯೋ ಅಥವಾ ಕಾಮಗಾರಿಯ ಗುಣಮಟ್ಟ ಕೊರತೆಯೋ ಇತ್ತೀಚಿಗೆ ನಡೆಸಿದ ಕಾಮಗಾರಿ ನೀರು ಪಾಲಾಗುತ್ತಿರುವ ಬಗ್ಗೆ ರೈತರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕುಸಿದು ಬಿದ್ದ ಮಣ್ಣನ್ನು ತೆರವುಗೊಳಿಸಲಾಗಿತ್ತು. ಇದೀಗ ಬರೆ ಸಹಿತ ಕಾಂಕ್ರೀಟಿಕರಣಗೊಳಿಸಿದ್ದ ತಡೆಗೋಡೆಯಲ್ಲಿ ರಂದ್ರ ಕಾಣಿಸಿಕೊಂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
Back to top button
error: Content is protected !!