ಕುಶಾಲನಗರ, ಅ 03: ಕುಶಾಲನಗರ ಕೇರಳ ಸಮಾಜದ ವತಿಯಿಂದ ಅ.05 ರ ಭಾನುವಾರ ಓಣಂ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ರವೀಂದ್ರನ್ ತಿಳಿಸಿದರು.
ಸಮಾಜದ ಕಟ್ಟಡದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ 7 ಗಂಟೆಯಿಂದ 9 ಗಂಟೆ ತನಕ ಎಪಿಸಿಎಂಎಸ್ ಸಭಾಂಗಣದಲ್ಲಿ ಪೂಕಳಂ ಸ್ಪರ್ಧೆ, 9 ರಿಂದ 10 ಗಂಟೆ ವರೆಗೆ 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ಸಮಾಜದ ಕಟ್ಟಡದ ಬಳಿಯಿಂದ ಮಾವೇಲಿ ವೇಷಧಾರಿ ಜೊತೆಯಲ್ಲಿ ಚಂಡೆ ವಾದ್ಯ ಸಹಿತ ಸಭಾಂಗಣದವರೆಗೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.
ಸಮಾಜದ ಅಧ್ಯಕ್ಷ ರವೀಂದ್ರನ್ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ವೇದಿಕೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚುರಂಜನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಸೈರಸ್ ಹೆಲ್ತ್ ಗ್ರೂಪ್ ಚೇರ್ ಮನ್ ಸೈನುಲ್ ಆಬಿದೀನ್, ಎಸ್.ಎನ್.ಡಿ.ಪಿ. ಕುಶಾಲನಗರ ಶಾಖೆ ಅಧ್ಯಕ್ಷ ಕೆ.ಟಿ. ಗಣೇಶ್, ಮಾವೇಲಿ ಸಹಕಾರ ಸಂಘದ ಅಧ್ಯಕ್ಷ ಎ.ಕೆ. ವೇಣು, ಸಮಾಜದ ನಿರ್ದೇಶಕ ಕೆ. ವರದ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಓಣಂ ಸಧ್ಯ ಏರ್ಪಡಿಸಲಾಗಿದೆ.
ಇದೇ ಸಂದರ್ಭ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿ ಜಾಯ್ಸ್ ಲೀನಾ ಜೋಸೆಫ್ ಸೇರಿದಂತೆ ಕೇರಳ ಸಮಾಜದ ಆರಂಭಿಕ ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿ, ಸೆಕೆಂಡ್ ಪಿಯುಸಿಯಲ್ಲಿ
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾಜದ ನಿರ್ದೇಶಕ ವರದ ಮಾತನಾಡಿ, ಕುಶಾಲನಗರ ಕೇರಳ ಸಮಾಜ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದ್ದು ರಜತ ಮಹೋತ್ಸವ ಕ್ಕೆ ಅಣಿಯಾಗುತ್ತಿರುವ ಬಗ್ಗೆ ಹಾಗೂ ಸಮಾಜ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಕೆ.ಬಾಬು ಮೂರ್ನಾಡು, ಕಾರ್ಯದರ್ಶಿ ಕೆ.ಜೆ.ರಾಬಿನ್, ಜಂಟಿ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕರಾದ ಎಂ.ಜಿ.ಪ್ರಕಾಶ್, ಜಿತೇಶ್, ಸುಶೀಲಾ, ನಿರ್ಮಲ ಶಿವದಾಸ್ ಇದ್ದರು.
Back to top button
error: Content is protected !!