ಕ್ರೈಂ

ಚಾಕು ಇರಿದು ಟಿಬೇಟ್ ವ್ಯಕ್ತಿಯ ಹತ್ಯೆ

ಕುಶಾಲನಗರ, ಸೆ 06: ಚಾಕು ಇರಿದು ಟಿಬೇಟ್ ವ್ಯಕ್ತಿಯನ್ನು‌ ಹತ್ಯೆ ಮಾಡಲಾಗಿದೆ. ಹುಣಸೂರು ತಾಲೂಕಿನ ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ನಂಬರ ೪ರಲ್ಲಿ ಟಿಬೆಟಿಯನ್ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ನಡೆದಿದ್ದು ಮತ್ತೊಬ್ಬ ಟಿಬೆಟಿಯನ್ ವ್ಯಕ್ತಿ ಗಂಭೀರ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಜಮಯಾಂಗ್ ಲೋಬ್ಸಂಗ್ (35) ಕೊಲೆಯಾದ ಟಿಬೆಟಿಯನ್ ವ್ಯಕ್ತಿ. ಗೊನಪ್ ಚೊಡೇಕ್ ಹತ್ಯೆ ಮಾಡಿದ ವ್ಯಕ್ತಿ. ಈತನು ಸಹ ಗಂಭೀರ ಗಾಯಗೊಂಡಿದ್ದಾನೆ. ಗೊನಫ್ ಮಾಜಿ ಸೈನಿಕನಾಗಿದ್ದು ಕ್ಯಾಂಪ್ ನಂ 4 ನಿವಾಸಿ ಎಂದು ತಿಳಿದುಬಂದಿದೆ.

ಚಾಕು ಇರಿತದಿಂದ ಜಮಾಯಂಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಂಭೀರಗಾಯಗೊಂಡ ಆರೋಪಿತ ಗೊನಪ್ ನನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿದು ಬುಧವಾರ ಜಿಲ್ಲಾವರಿಷ್ಠಧಿಕಾರಿ ಎನ್.ವಿಷ್ಣವರ್ದನ ಅವರು ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಟಿಬೆಟಿಯನ್ ಸೆಟ್ಲ್ಮೆಂಟ್ ಚೇರ್ಮೆನ್ ಡೊಲ್ಮಾ ಸಿರಿಂಗ್, ಡಿವೈಎಸ್ಪಿ ಕೆ ಎಲ್ ಗಣೇಶ, ಸಿಪಿಐ ಬಿ ಎಸ್ ಲೋಕಾಪುರ ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಟಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!