ಕುಶಾಲನಗರ, ಜು 26: ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಅರುಣ್ ನದ್ದು ಎನ್ನಲಾದ ಮೃತದೇಹ ಅರುಣ್ ಅವರದ್ದಲ್ಲ ಎಂದು ಖಚಿತಗೊಂಡಿದೆ.
ಅರಣ್ ಮೃತದೇಹ ಶೋಧ ಕಾರ್ಯ ಸಂದರ್ಭ ಗಂಡಸಿನ ಮೃತದೇಹ ನದಿ ಬದಿಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಇದು ಅರುಣ್ ಅವರ ಮೃತದೇಹ ಎಂದು ನಂಬಲಾಗಿತ್ತು. ಆದರೆ ಕುಟುಂಬ ಸದಸ್ಯರು ಮೃತದೃಹದ ಗುರುತು ಪತ್ತೆಹಚ್ಚದ ಕಾರಣ ಇದು ಬೇರೆ ವ್ಯಕ್ತಿಯ ಮೃತದೇಹ ಎಂದು ತಿಳಿದುಬಂದಿದೆ.
ಜು. 18 ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಸವನಹಳ್ಳಿ ಗ್ರಾಮದ ಸೋಲಿಗರ ಜಾತಿಗೆ ಸೇರಿದ ಮಹೇಶ ಎಂಬುವವನು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದು ಆತನ ಶವ ಎನ್ನಲಾಗುತ್ತಿದ್ದು ಕುಟುಂಬ ಸದಸ್ಯರು ಖಚಿತಪಡಿಸಬೇಕಿದೆ.
Back to top button
error: Content is protected !!