ಕುಶಾಲನಗರ,ಜೂ.07: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹೆಗ್ಗಡಹಳ್ಳಿಯ ಶ್ರೀ ಶನೈಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನೇಶ್ವರ ಜಯಂತಿ ಪ್ರಯುಕ್ತ ಶನೇಶ್ವರ ಸ್ವಾಮಿ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಶ್ರಧ್ಧಾಭಕ್ತಿಯಿಂದ ನಡೆದವು.
ದೇವಾಲಯದಲ್ಲಿ ಗಣಯಾಗ, ನವಕಲಶಾರಾಧನೆ, ಪ್ರಧಾನ ಹೋಮ, ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಪೂರ್ಣಾಹುತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾತಿ ನಡೆದ ನಂತರ ಭಕ್ತರಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಹಾರಂಗಿ ನದಿಯಲ್ಲಿ ಶ್ರೀ ಸ್ವಾಮಿ ವಿಗ್ರಹದ ಜಳಕದ ನಂತರ ಅಲಂಕೃತವಾದ ಭವ್ಯ ರಥದಲ್ಲಿ ಸ್ವಾಮಿಯನ್ನು ಮೆರವಣಿಗೆ ನಡೆಸಲಾಯಿತು.
ಧರ್ಮಸ್ಥಳದ ರಾಮಚಂದ್ರ ತಂತ್ರಿಗಳ ತಂಡದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭ ಶಿವೈಕ್ಯರಾದ ಎಲ್ಲೂಬಾಯಿ ಅಮ್ಮನವರ ಕುಟುಂಬಸ್ಧರು ಮತ್ತು ಭಕ್ತವೃಂದ, ದೇವಾಲಯ ಸಮಿತಿಯ ಪ್ರಮು ಪ್ರಮುಖರಾದ ಸುನಿಲ್ ರಾವ್,ಅರುಣ್ ರಾವ್, ನಾಗರಾಜ್, ಸೇರಿದಂತೆ ಕೂಡಿಗೆ ಕೂಡುಮಂಗಳೂರು, ಮದಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.
Back to top button
error: Content is protected !!