ಕುಶಾಲನಗರ, ಜು 20: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನಲ್ಲಿ ಪುಷ್ಪಾ ಗಣೇಶ್ ಅವರ ಮನೆ ಮಳೆಯಿಂದಾಗಿ ಹಾನಿಗೊಳಗಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಂತರ್ ಗೌಡ ಅವರು ಪರಿಶೀಲನೆ ನಡೆಸಿ ಕುಟುಂಬಕ್ಕೆ ಆಹಾರ ಕಿಟ್ ಒದಗಿಸಿ ಪರಿಹಾರದ ಭರವಸೆ ನೀಡಿದರು.
ಈ ಸಂದರ್ಭ ತಹಸೀಲ್ದಾರ್ ಕಿರಣ್ ಗೌರಯ್ಯ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಆರ್.ಐ.ಸಂತೋಷ್, ವಿ.ಎ.ಗೌತಮ್, ಗ್ರಾಮಸ್ಥರಾದ ಸುನಿಲ್, ಕೃಷ್ಣೇಗೌಡ, ಚೇತನ್, ಖತೀಜಾ, ಇಬ್ರಾಹಿಂ ಮತ್ತಿತರರು ಇದ್ದರು.
Back to top button
error: Content is protected !!