ಕುಶಾಲನಗರ, ಜು 06: 2019 ರಲ್ಲಿ ನಾಪೊಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ನಡೆದಿದ್ದ ರಾಧಾ ಎಂಬವರ ಕೊಲೆ ಪ್ರಕರಣ ಸಂಬಂಧ ಕುಶಾಲನಗರದ ಗೊಂದಿಬಸವನಹಳ್ಳಿ ನಿವಾಸಿ ಸುಬ್ರಮಣ್ಯ, ಕಾವ್ಯ, ಜನತಾ ಕಾಲನಿ ನಿವಾಸಿ ಮದನ್ ಎಂಬವರಿಗೆ ಶಿಕ್ಷೆ ಪ್ರಕಟಗೊಂಡಿದೆ.
ರಾಧಾ ಎಂಬವರ ಮನೆಗೆ ನುಗ್ಗಿದ ಸುಬ್ರಮಣ್ಯ ಹಾಗೂ ಮದನ್ 21.02.2019 ರಂದು ರಾಧಾ ಅವರ ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿ ಚಿನ್ನಾಭರಣ ದೋಚಿದ್ದರು. ನಂತರ ಸುಬ್ರಮಣ್ಯ ತನ್ನ ಸಹೋದರಿ ಕಾವ್ಯ ಎಂಬವರ ಸಹಾಯದಿಂದ ಸ್ವಲ್ಪ ಪ್ರಮಾಣದ ಚಿನ್ನಾಭರಣವನ್ನು ಮೈಸೂರಿನಲ್ಲಿ ಮಾರಾಟ ಮಾಡಿದ್ದರು.
ಸದರಿ ಪ್ರಕರಣದ ವಿಚಾರಣೆ ಮುಗಿದಿದ್ದು ಮಡಿಕೇರಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಸುಬ್ರಮಣ್ಯ ಮತ್ತು ಮದನ್ ಗೆ ಜೀವಾವಧಿ, ಸಹಕರಿಸಿದ ಕಾವ್ಯ ಗೆ 3 ವರ್ಷ ಶಿಕ್ಷೆ ಪ್ರಕಟಿಸಿದೆ.
Back to top button
error: Content is protected !!