ಕುಶಾಲನಗರ, ಜು 05: ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರ ದಿಂದ ಯುವ ನಾಯಕ ಪದವೀಧರ ಶರತ್ ಕುಮಾರ್ HJ ಅವರಿಗೆ BJP ಮತ್ತು JDS ಮೈತ್ರಿ ಕೂಟದ ಅಭ್ಯರ್ಥಿ ಆಗಿ ಟಿಕೆಟ್ ಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲೆ ಯ ಪದಾಧಿಕಾರಿಗಳು ಕೊಡಗು ಜಿಲ್ಲೆಯ BJP ಹಾಗೂ JDS ಹೈಕಮಾಂಡ್ ಗೆ ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ನಡೆಯವ ತಾಲೋಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಯಲ್ಲಿ ಹೆಬ್ಬಾಲೆ ಯ ವಿದ್ಯಾವಂತ ಪದವೀಧರ ಯುವ ಮುಖಂಡ, ಸಮಾಜದ ಸೇವಕ, ಶುಂಠಿ ವ್ಯಾಪಾರಿ, ರೈತ ಸಂಘ ಹಾಗೂ ಹಸಿರು ಸೇನೆ ಯ ಕೊಡಗು ಜಿಲ್ಲಾಧ್ಯಕ್ಷರಾದ ಶರತ್ ಕುಮಾರ್ HJ ಗೆ ಹೆಬ್ಬಾಲೆ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು BJP ಹಾಗೂ JDS ಜಿಲ್ಲಾ ಕೊಡಗು ಘಟಕಕ್ಕೆ ಹಸಿರು ಸೇನೆ ಯ ಗೌರವ ಅಧ್ಯಕ್ಷ ಚಂದ್ರಣ್ಣ, ಹೆಬ್ಬಾಲೆ ಮಾಜಿ ಗ್ರಾ ಪಂ, ಅಧ್ಯಕ್ಷ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಪ್ರಸನ್ನ ರೆಡ್ಡಿ, ಕೊಡಗು ಜಿಲ್ಲಾ ಸಂಚಾಲಕ ಡಾ. ಅರುಣ್ ಕುಮಾರ್ HR, ಹೆಬ್ಬಾಲೆ ಘಟಕದ ಅಧ್ಯಕ್ಷ ಬಾಂಬೆ ಪುಟ್ಟಣ್ಣ, ಹೆಬ್ಬಾಲೆ ಅವಿನಾಶ್, ವೀರಶೈವ ಮುಖಂಡ. ತೊರೆನೂರು ಘಟಕದ ಅಧ್ಯಕ್ಷ ಅರುಣ, ಹಳೆಗೋಟೆ ರವಿ, ಶಿರಂಗಾಲ ವಿಶ್ವಕರ್ಮ ಸಮಾಜದ ಮುಖಂಡ ಸೋಮು ಮನವಿ ಮಾಡಿದ್ದಾರೆ.
ಶರತ್ ಕುಮಾರ್ ವಿದ್ಯಾವಂತ ಪದವೀಧರ ಯುವಕನಾಗಿದ್ದು ನೊಂದವರಿಗೆ ಸ್ಪಂದಿಸುವ ನಾಯಕತ್ವ ಗುಣ ಮತ್ತು ಜನರ ಕಷ್ಟ ಸುಖಗಳನ್ನ ಕೇಳುವ ಗುಣ ಇದೆ. ಹಾಗೆಯೇ ಎಲ್ಲಾ ಕಾರ್ಯಕ್ರಮಗಳಿಗೂ ಸಹ ಧನ ಸಹಾಯವನ್ನು ನೀಡಿರುತ್ತಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಯಲ್ಲಿ NDA ಮೈತ್ರಿಕೂಟದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಒಡೆಯರು ಅವರ ಗೆಲುವಿಗೆ ಹಸಿರು ಸೇನೆ ಸಂಪೂರ್ಣ ಶ್ರಮವಹಿಸಿದೆ. ಮತ್ತು ಕೊಡಗು ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಳಗೊಂಡು ಪ್ರಾಮಾಣಿಕವಾಗಿ ದುಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರಿಗೆ ಮತ್ತು ವಿದ್ಯಾವಂತರಿಗೆ ಟಿಕೆಟ್ ಕೊಟ್ಟು. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಚರ್ಚೆ ಮಾಡಿ ಟಿಕೆಟನ್ನು ನೀಡಿದರೆ ಗೆಲುವು ಪ್ರಮುಖ ಪಾತ್ರ ವಹಿಸುತ್ತದೆ. ಮೋದಿ ಮತ್ತು ಕುಮಾರಸ್ವಾಮಿ ಅವರ ಚಿಂತನೆ ಒಳಗೊಂಡಂತೆ ಯುವಕರಿಗೆ ಆದ್ಯತೆಯನ್ನು ಕೊಟ್ಟಿರುತ್ತಾರೆ ಹಾಗೆಯೇ ಶರತ್ ಕುಮಾರ್ ಗೆ ಹೆಬ್ಬಾಲೆ ಕ್ಷೇತ್ರದಿಂದ ಟಿಕೇಟನ್ನು ಕೊಟ್ಟು ಯುವ ನಾಯಕನನ್ನ ಗೆಲ್ಲಿಸಬೇಕೆಂದು ಹಸಿರು ಸೇನೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
Back to top button
error: Content is protected !!