ಶಿಕ್ಷಣ

ನಗ್ಮಾ ಬಾನು ಹೆಚ್. ಎ., ಅವರಿಗೆ ಡಾಕ್ಟರೇಟ್ ಪದವಿ

ಕುಶಾಲನಗರ, ಜೂ 09: ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಅಬ್ಬಾಸ್ ಮತ್ತು ನಸ್ರೀನ್ ದಂಪತಿಗಳ ಮಗಳಾಗಿರುವ ನಗ್ಮಾ ಬಾನು ಹೆಚ್. ಎ., ಅವರು, ಮಂಗಳೂರು ವಿಶ್ವವಿದ್ಯಾನಿಲಯದ, ಮಂಗಳ ಗಂಗೋತ್ರಿಯಲ್ಲಿನ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಬಾಲಕೃಷ್ಣ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ “Synthesis of Some Novel Heterocyclic Compounds Via Dipolar Cycloaddition Reactions” ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.

ಕನ್ನಡ ಉಪನ್ಯಾಸಕರಾದ ಡಾ. ಜ಼ಮೀರ್ ಅಹಮದ್ ಅವರ ಧರ್ಮಪತ್ನಿ ಆಗಿರುವ ನಗ್ಮಾ ಬಾನು ಹೆಚ್ ಎ ಅವರು, ತಮ್ಮ ಪಿಯುಸಿ ಮತ್ತು ಸ್ನಾತಕ ಪದವಿಯನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪೂರ್ಣಗೊಳಿಸಿರುತ್ತಾರೆ. ಪ್ರಸ್ತುತ ಕೊಡಗು ವಿಶ್ವವಿದ್ಯಾಲಯದ, ಜ್ಞಾನ ಕಾವೇರಿ ಆವರಣದಲ್ಲಿನ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!