ಅವ್ಯವಸ್ಥೆ

ಕಾಡು ಪಾಲಾದ ಮಾಹಿತಿ ಫಲಕ

ಕುಶಾಲನಗರ, ಜು 13: ಕುಶಾಲನಗರ ತಾಲೂಕು ತಹಸೀಲ್ದಾರ್ ಕಛೇರಿ ಆವರಣದೊಳಗೆ ಅಳವಡಿಸಿರುವ ಸರಕಾರದ ಯೋಜನೆಗಳ ಮಾಹಿತಿ ಫಲಕ (ಕರ್ನಾಟಕ ವಾರ್ತೆ) ಸಂಪೂರ್ಣ ಕಾಡುಪಾಲಾಗಿದೆ. ತಾಲೂಕು ದಂಡಾಧಿಕಾರಿ ಕೇಂದ್ರದ ಆವರಣದೊಳಗೆ ಇಂತಹ ನಿರ್ಲಕ್ಷ್ಯತನದ ಪ್ರಸಂಗ ಎದುರಾಗಿರುವುದು ನಾಚಿಗೆಗೇಡಿನ ವಿಚಾರ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಆನಂದ್ ಕನ್ನಡಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಂಪೌಂಡ್ ಒಳಗೆ ಅಶುಚಿತ್ವ ತಾಂಡವವಾಡುತ್ತಿದ್ದು ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!